Header Ads
Header Ads
Breaking News

ನೀರು ವಿತರಣೆ ಮಾಡುತ್ತಿದ್ದ ಕೊಳವೆ ಬಾವಿಯ ಮೋಟಾರ್ ನಾಪತ್ತೆ ರಿಪೇರಿಗೆಂದು ಕೊಂಡ ಹೋದಾತ ಮರಳಿ ತಂದಿಲ್ಲ ನೀರಿಗಾಗಿ ಪರದಾಡುತ್ತಿರುವ ತಲಪಾಡಿ ನಾಗರಿಕರು

ಮಂಜೇಶ್ವರ: ಕರ್ನಾಟಕ ಕೇರಳ ಗಡಿ ಪ್ರದೇಶವಾದ ತಲಪಾಡಿಯಲ್ಲಿ ಸುಮಾರು ಒಂದು ಸಾವಿರ ಮನೆಗಳಿಗೆ ಕೇರಳ ವಾಟರ್ ಆಥೋರಿಟಿ ನೀರು ವಿತರಣೆ ಮಾಡುತಿದ್ದ ಕೊಳವೆ ಬಾವಿಯ ಮೋಟಾರೊಂದು ಹಾಳಾಗಿರುವ ಹಿನ್ನೆಲೆಯಲ್ಲಿ ವಾಟರ್ ಆಥೋರಿಟಿ ಸಿಬ್ಬಂದಿ ರಿಪೇರಿಗೆಂದು ಹೇಳಿ ಮೋಟಾರನ್ನು ಕೊಂಡು ಹೋದವನು ಎರಡುವರೆ ತಿಂಗಳುಗಳೇ ಕಳೆದರೂ ಮರಳಿ ತಂದಿಲ್ಲವೆಂಬುದಾಗಿ ಊರವರು ಆರೊಪಿಸುತಿದ್ದಾರೆ.

ತಲಪಾಡಿಯಲ್ಲಿ ಎರಡು ಕೊಳವೆ ಬಾವಿಗಳಿವೆ ಇದನ್ನು ಜಂಟಿಯಾಗಿ ಚಲಾಯಿಸಿದರೆ ಮಾತ್ರ ಉದ್ಯಾವರ 10ನೇ ಮೈಲು ಪ್ರದೇಶದ ತನಕ ನೀರು ಗ್ರಾಹಕರಿಗೆ ತಲುಪುತ್ತಿದೆ. ಅಧಿಕ ಮಂದಿಯೂ ಈ ನೀರನ್ನೇ ಆಶ್ರಯಿಸುವವರಾಗಿದ್ದಾರೆ. ಇದೀಗ ಸೆಕೆ ಕಾಲ ಕೂಡಾ ಸನ್ನಿಹಿತವಾಗಿರುವ ಹಿನ್ನೆಲೆಯಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಇಂತಹ ಸಂಧಿಗ್ದ ಪರಿಸ್ಥಿತಿಯಲ್ಲೂ ಹಲವು ಸಲ ಸ್ಥಳೀಯ ನಾಗರಿಕರು ವಾಟರ್ ಆಥೋರಿಟಿ ಇಲಾಖೆಯ ಗಮನಕ್ಕೆ ತಂದಿದ್ದರೂ ಯಾವುದೇ ಸ್ಪಂಧನೆ ಇಲ್ಲವೆನ್ನಲಾಗಿದೆ.ಕೆಲವು ಮನೆಯವರು ಇದೀಗ ವಾಟರ್ ಆಥೋರಿಟಿ ನೀರು ಲಭಿಸದ ಹಿನ್ನೆಲೆಯಲ್ಲಿ ಹಣ ಕೊಟ್ಟು ಟ್ಯಾಂಕರಿನಲ್ಲಿ ನೀರು ತರಿಸಬೇಕಾದ ಪರಿಸ್ಥಿತಿ ಕೂಡಾ ಬಂದೊದಗಿದೆ. ಸಂಬಂಧಪಟ್ಟವರು ಕೂಡಲೇ ಈ ಬಗ್ಗೆ ಗಮನ ಹರಿಸದೇ ಇದ್ದರೆ ಕುಂಬಳೆ ವಾಟರ್ ಆಥೋರಿಟಿ ಕಚೇರಿ ಮುಂಬಾಗದಲ್ಲಿ ಪ್ರತಿಭಟನೆಗೆ ನಡೆಸುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.
ವರದಿ: ರೆಹಮಾನ್ ಮಂಜೇಶ್ವರ