Header Ads
Header Ads
Breaking News

ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲ, ಗುಬ್ಬೆದ್ದು ನಾರುತ್ತಿರುವ ತೂಮಿನಾಡು ಪರಿಸರ

ಮಂಜೇಶ್ವರ ಗ್ರಾ. ಪಂ. ಎರಡನೇ ವಾರ್ಡು ವ್ಯಾಪ್ತಿಯ ತೂಮಿನಾಡಿನಿಂದ ದೇವಿಪುರವನ್ನು ಸಂಪರ್ಕಿಸುವ ರಸ್ತೆಯೊಂದು ನೀರು ಹರಿದು ಹೋಗಲು ಪರ್ಯಾಯ ವ್ಯವಸ್ಥೆ ಇಲ್ಲದೆ ರಸ್ತೆಯೇ ತೋಡಾಗಿ ಪರಿಣಮಿಸಿದೆ.
ಹಲವು ಕಡೆಗಳಿಂದ ಬರುತ್ತಿರುವ ತ್ಯಾಜ್ಯಗಳು ಇಲ್ಲಿ ಸಂಗ್ರಹವಾಗಿದ್ದು ರಸ್ತೆ ಮಧ್ಯೆಯೇ ಇದ್ದು ಕೊಂಡಿದೆ. ಇದನ್ನು ದಾಟಿಕೊಂಡೇ ವಿದ್ಯಾರ್ಥಿಗಳ ಸಹಿತ ಇತರರು ಸಾಗಬೇಕಾಗಿದೆ. ಗುಬ್ಬೆದ್ದು ನಾರುತ್ತಿರುವ ತ್ಯಾಜ್ಯಗಳ ದುರ್ನಾತದಿಂದ ಸ್ಥಳೀಯರು ಸಾಂಕ್ರಾಮಿಕ ರೋಗ ಭೀತಿಯನ್ನು ಎದುರಿಸುತಿದ್ದಾರೆ. ಈ ಬಗ್ಗೆ ಸ್ಥಳೀಯರು ವಾರ್ಡ್ ಸದಸ್ಯರಲ್ಲಿ ಇದಕ್ಕೊಂದು ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವಂತೆ ಅಲವತ್ತು ಕೊಂಡರೂ ಸದಸ್ಯೆ ಇತ್ತ ಕಡೆ ಕಿಂಚತ್ತೂ ಗಮನ ಹರಿಸಲಿಲ್ಲವೆಂಬ ಆರೋಪ ಕೇಳಿ ಬಂದಿದೆ.
ಸುಮಾರು ನೂರಕ್ಕಿಂತಲೂ ಹೆಚ್ಚು ಕುಟುಂಬಗಳು ಈ ರಸ್ತೆಯನ್ನು ದಾಟಿಕೊಂಡೇ ಸಾಗಬೇಕಾಗಿದೆ. ಕಳೆದ ಹಲವಾರು ವರ್ಷಗಳಿಂದ ಈ ಸಮಸ್ಯೆ ಈ ಪ್ರದೇಶದಲ್ಲಿ ಮರುಕಳಿಸುತಿದ್ದರೂ ವಾರ್ಡ್ ಸದಸ್ಯೆ ಮಾತ್ರ ಫಂಡ್ ಮಂಜೂರಾಗಿರುವುದಾಗಿ ಹೇಳುವುದಲ್ಲದೆ ಸ್ಥಳವನ್ನು ಕೂಡಾ ಸಂದರ್ಶಿಸಿಲ್ಲವೆಂದು ಸ್ಥಳೀಯರು ಹೇಳುತಿದ್ದಾರೆ.

Related posts

Leave a Reply