Breaking News

ನೀರ್ಚಾಲಿನಲ್ಲಿ ಆಖಿಲ ಭಾರತ ಮೊಗೇರ ಮಹಾಸಂಗಮ ಸಂಭ್ರಮ, ದಕ್ಷಿಣ ಕನ್ನಡ ಜಿ. ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಭಾಗಿ


ಕೇರಳ ರಾಜ್ಯ ಮೊಗೇರ ಸರ್ವೀಸ್ ಸೊಸೈಟಿ ಹಾಗೂ ಕಾಸರಗೋಡು ಜಿಲ್ಲಾ ಮೊಗೇರ ಸರ್ವೀಸ್ ಸೊಸೈಟಿ ಇದರ ೧೫ನೇ ವಾರ್ಷಿಕೋತ್ಸವದ ಅಂಗವಾಗಿ ಕೇರಳ ಕರ್ನಾಟಕ ಮೊಗೇರ ಸಮುದಾಯ ಸಂಘಟನೆಗಳ ಸಹಕಾರದಲ್ಲಿ ಅಖಿಲ ಭಾರತ ಮೊಗೇರ ಮಹಾ ಸಂಘ ನೀರ್ಚಾಲು ಸಂಭ್ರಮವು ಸಂಸ್ಕೃತ ಕಾಲೇಜು ಶಾಲೆಯ ಸ್ವಾಮಿ ಆನಂದ ತೀರ್ಥ ಸ್ಮಾರಕ ನಗರದಲ್ಲಿ ನಡೆಯಿತು.
ಮಹಾಸಂಗಮವನ್ನು ದ.ಕ. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಉದ್ಘಾಟಿಸಿ ಮಾತನಾಡುತ್ತಾ ಮೊಗೇರರು ಪೂರ್ವ ಕಾಲದಿಂದಲೇ ಸಂಸ್ಕತಿಜನ್ಯವಾಗಿ ತಮ್ಮ ಆಚಾರ ವಿಚಾರಗಳನ್ನು ಉಳಿಸಿಕೊಂಡು ಬರುವಲ್ಲಿ ಮುತುವರ್ಜಿ ವಹಿಸಿದ್ದಾರೆ. ಆದರೆ ಇಂತಹ ಆಚರಣೆಗಳು ಇಂದಿನ ಯುವ ಜನಾಂಗದ ಅರಿವಿನ ಹಾಗೂ ಮೌಲ್ಯತೆಯ ಕೊರತೆಯಿಂದ ದೂರವಾಗುತ್ತಿದ್ದು ಇದನ್ನು ಉಳಿಸಿಕೊಳ್ಳದಿದ್ದರೆ ಜನಾಂಗ ಎದುರಿಸಬೇಕಾದ ದುರಂತ ನಮ್ಮ ಕಣ್ಣಮುಂದಿದೆ. ಸಂಘಟನಾತ್ಮಕ ಶಕ್ತಿಯಿಂದಷ್ಟೆ ಇದನ್ನು ಪುನರುಜ್ಜೀವನಗೊಳಿಸಲು ಸಾಧ್ಯ ಎಂದರು. ಈ ನಿಟ್ಟಿನಲ್ಲಿ ಕಳೆದ ಹಲವಾರು ವರುಷಗಳಿಂದ ಸಮುದಾಯಿಕತೆಯೆಡೆಯಲ್ಲಿ ಕರ್ತವ್ಯ ನಿರ್ವಹಿಸುವ ಮೊಗೇರ ಸರ್ವಿಸ್ ಸೊಸೈಟಿಯ ಕಾರ್ಯ ವೈಖರಿ ಶ್ಲಾಘನೀಯವೆಂದರು.
ಅ.ಭಾ.ಮೊ. ಮಹಾಸಂಗಮದ ಅಧ್ಯಕ್ಷರಾದ ಧರ್ಮದರ್ಶಿ ಬಾಬು ಪಚ್ಲಂಪಾರೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಮಧೂರು ಕ್ಷೇತ್ರದಲ್ಲಿ ಮದರು ಮಾತೆಯ ಶಿಲಾ ವಿಗ್ರಹ ಸ್ಥಾಪನೆ, ಮೊಗೇರ ಆರಾಧನಲಯಗಳ, ಭವನ ನಿರ್ಮಣದ ಉದ್ಯೋಗ ಹಾಗೂ ಶಿಕ್ಷಣದ ಅಭಿವೃದ್ಧಿಗೆ ಸರಕಾರದ ಗಮನ ಸೆಳೆಯುವುದೇ ಈ ಮಹಾ ಸಂಗಮದ ಮುಖ್ಯ ಉದ್ದೇಶ ಎಂದರು. ಬದಿಯಡ್ಕ ಗ್ರಾ.ಪಂ. ಸದಸ್ಯ ಡಿ. ಶಂಕರ, ಶಾಂತ ಬಾರಡ್ಕ, ಮೊಗೇರ ಸಂಘದ ಜಿಲ್ಲಾಧ್ಯಕ್ಷ ಅಂಗಾರ ಅಜಕ್ಕೋಡು, ಸೀತಾರಾಮ ಕೊಂಚಾಡಿ, ವಿಜಯ ವಿಕ್ರಮ ರಾಮಕುಂಜ, ಕೆ.ಮಾಣಿ ಕಮ್ಮರಗೋಡು, ಸುರೇಶ ಕುಮಾರ ಬಂಟ್ವಾಳ, ರವಿಚಂದ್ರ ಪಡುಬೆಟ್ಟು, ಮೊಗೇರ ಸಂಘದ ಪ್ರ.ಕಾರ್ಯದರ್ಶಿ ಕೆ. ಕೆ. ಸ್ವಾಮಿಕೃಪಾ, ಗಿರಿಜಾ ತಾರನಾಥ್, ಪೂವಪ್ಪ ಮೂಡಿಗೆರೆ, ಮಾಯಿಲಪ್ಪ ಪುತ್ತೂರು, ನ್ಯಾಯವಾದಿ ಶೈನ್ ಕುಮಾರ್, ಸಿ. ಎಚ್. ಶ್ಯಾಮ, ರಾಧಕೃಷ್ಣ ಉಳಿಯತ್ತಡ್ಕ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply