Header Ads
Header Ads
Breaking News

ನೀಲಾವರ ಗೋ ಶಾಲೆಗೆ ಜೋಳ ಮೇವು ಪೂರೈಕೆ : ಪೇಜಾವರ ಶ್ರೀಗಳಿಂದಲೇ ಕಟಾವು

ಕೆಲವರ ಗೋಸೇವೆ ಅನ್ನೋದು ಕೇವಲ ಮಾತಿಗಷ್ಟೇ ಸೀಮಿತವಾಗುತ್ತವೆ.ಆದರೆ ಉಡುಪಿಯ ನೀಲಾವರದ ಗೋಶಾಲೆಗೆ ಗೋ ಭಕ್ತರು ಪ್ರತೀ ವರ್ಷ ತನ್ನ ಗದ್ದೆಯಲ್ಲಿ ಜೋಳ ಬೆಳೆದು ಗೋವುಗಳಿಗೆ ಮೇವು ನೀಡುತ್ತಿದ್ದಾರೆ ಅವರ ಸೇವೆಗೆ ಪೂರಕವಾಗಿ ಪೇಕಾವರ ಕಿರಿಯ ಯತಿ ಸ್ವತ ಗದ್ದೆಗಿಳಿದು ಜೋಳದ ಪೈರು ಕಟಾವು ಮಾಡುತ್ತಾರೆ. ಸ್ವಾಮೀಜಿ ಜೊತೆ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಕೈ ಜೋಡಿಸುತ್ತಾರೆ. ಇದೊಂದು ವಿಶಿಷ್ಟ ಗೋ ಸೇವೆ.ಉಡುಪಿಯ ನೀಲಾವರದಲ್ಲಿ ಸಾವಿರಾರು ಗೋವುಗಳನ್ನು ಸಾಕಿ ಸಲಹುವ ಧರ್ಮ ಕಾಯಕ ನಡೆಯುತ್ತಿದೆ. ಪೇಜಾವರ ಮಠದ ಕಿರಿಯ ಸ್ವಾಮೀಜಿಯವರಾದ ವಿಶ್ವ ಪ್ರಸನ್ನ ತೀರ್ಥರು ಮಹಾನ್ ಗೋ ಪ್ರೇಮಿ. ಸಾವಿರಾರು ಗೋವುಗಳನ್ನು ಸಾಕಿ ಸಲಹುವ ಗೋಪಾಲಕ. ಅನಾಥವಾದ ಹಸುಗಳು, ಗಾಯಗೊಂಡು ಬಿದ್ದಿರುವ ಹಸುಗಳಿಗೆ ತಮ್ಮ ಗೋಶಾಲೆಯಲ್ಲಿ ಪೋಷಣೆ ನೀಡುತ್ತಾರೆ. ಆದರೆ ಇಷ್ಟೊಂದು ಹಸುಗಳನ್ನು ಸಾಕುವುದು ಸುಲಭದ ಮಾತಲ್ಲ. ತಿಂಗಳಿಗೆ ಲಕ್ಷಾಂತರ ರೂಪಾಯಿ ವೆಚ್ಚ ತಗಲುತ್ತದೆ. ಗೋವುಗಳ ಆಹಾರಕ್ಕಾಗಿ ಅಧಿಕ ಪ್ರಮಾಣದ ಹಿಂಡಿ ಹುಲ್ಲು ಅಗತ್ಯವಿದೆ. ಇದಕ್ಕಾಗಿ ಊರ ಪರವೂರ ಭಕ್ತರ ಸಹಕಾರದ ಮೂಲಕ ಗೋವುಗಳ ಪಾಲನೆ ಮಾಡುತ್ತಿದ್ದಾರೆ ಸ್ವಾಮೀಜಿ. ಕೆಲ ಸಂಘ ಸಂಸ್ಥೆಗಳು ಹುಲ್ಲು ಒದಗಿಸುತ್ತವೆ. ಇನ್ನು ಕೆಲವು ಭಕ್ತರು ತಮ್ಮ ಗದ್ದೆಯಲ್ಲಿ ಜೋಳ ಬೆಳೆದು ಗೋ ಶಾಲೆಗೆ ನೀಡುತ್ತಾರೆ. ಭಕ್ತರ ಈ ಸೇವಾ ಕೈಂಕರ್ಯಕ್ಕೆ ಸ್ವಾಮೀಜಿ ಗೋಶಾಲೆಯ ಹಸುಗಳ ಪಾಲನೆಗೆ ತಾವೇ ಸ್ವತ ಗದ್ದೆಗಿಳಿದು ಪೈರು ಕಟಾವು ಮಾಡುತ್ತಾರೆ. ಪೇಜಾವರ ಕಿರಿಯ ಶ್ರೀಗಳು ಸರಕಾರದ ಅನುದಾನವಿಲ್ಲದೆ ಸಾರ್ವಜನಿಕರ,ಭಕ್ತರ ಸಹಕಾರದಿಂದ ಗೋ ಸೇವೆ ಮಾಡುತ್ತಿದ್ದಾರೆ.

ಉಡುಪಿಯ ಕುಂಜಾರುಗಿರಿಯ ಸುದರ್ಶನ್ ಎಂಬ ಭಕ್ತರು ಕಳೆದ ಕೆಲ ವರ್ಷಗಳಿಂದ ತನ್ನ ಒಂದು ಎಕರೆ ಗದ್ದೆಯಲ್ಲಿ ಜೋಳ ಬೆಳೆದು ಅದನ್ನು ನೀಲಾವರ ಗೋ ಶಾಲೆಗೆ ನೀಡುತ್ತಾರೆ. ಜೋಳದ ಗದ್ದೆಗೆ ಸಮೃದ್ಧವಾದ ಗೊಬ್ಬರ ನೀರಿನ ಎರಕದೊಂದಿಗೆ ಜತನದಿಂದ ಜೋಳ ಬೆಳೆಯುತ್ತಾರೆ. ಅದು ಬೆಳೆಯುವ ಸಮಯದಲ್ಲಿ ಊರಿನ ಜನರ ಸಹಕಾರದಿಂದ ಕಠಾವು ಮಾಡಿ ನೀಲಾವರ ಗೋಶಾಲೆಗೆ ನೀಡುತ್ತಾರೆ. ಇವರ ನಿಸ್ವಾರ್ಥ ಸೇವೆಗೆ ಸ್ವತಃ ಸ್ವಾಮೀಜಿಯೇ ಗದ್ದೆಗಿಳಿದು ಕಠಾವು ಕಾರ್ಯದಲ್ಲಿ ಪಾಲ್ಗೊಂಡರು. ಸ್ಥಳೀಯ ಶಾಲೆಯ ವಿದ್ಯಾರ್ಥಿಗಳು ಈ ಕಾರ್ಯದಲ್ಲಿ ಭಾಗವಹಿಸಿ ಹೊಸ ಅನುಭವ ಪಡೆದರು . ಊರಿನ ಜನರೂ ಈ ಕಾರ್ಯದಲ್ಲಿ ಭಾಗವಹಿಸಿ ಗೋ ಸೇವೆಗೆ ತಮ್ಮಿಂದಾದ ಕಾಣಿಕೆ ಸಲ್ಲಿಸಿದರು. ಪೇಜಾವರ ಶ್ರೀಗಳ ಸದ್ದಿಲ್ಲದ ಗೋ ಸೇವೆಗೆ ಮಾರುಹೋಗಿ ನಮ್ಮಿಂದಾದ ಸಹಾಯ ಮಾಡುವ ಕಾರಣದಿಂದ ತಾನು ಪ್ರತೀ ವರ್ಷ ಜೋಳ ಬೆಳೆಸಿ ಗೋ ಶಾಲೆಗೆ ನೀಡುತ್ತಿದ್ದೇನೆ ಎಂದು ಸುದರ್ಶನ್ ಹೇಳುತ್ತಾರೆ. ಜೊತೆಗೆ ಈ ಕಾರ್ಯದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೂ ಹೊಸ ಅನುಭವ ದೊರೆತಂತಾಗಿದೆ. ಕೇವಲ ವೇದಿಕೆಯ ಮಾತಿಗೆ ಗೋ ಸೇವೆ ಉಳಿಯದೆ ಕಾರ್ಯ ರೂಪದಲ್ಲಿ ಅಳವಡಿಸಿಕೊಂಡಾಗ ಎಲ್ಲರಲ್ಲೂ ಧನ್ಯತಾ ಭಾವ ದೊರೆಯುತ್ತದೆ ಎನ್ನುವುದಕ್ಕೆ ಈ ಕಾರ್ಯ ಸಾಕ್ಷಿಯಾಯಿತು

ದೇಶದ ಕೃಷಿ ಕಾಯಕದಲ್ಲಿ ಪ್ರಮುಖ ಪಾತ್ರ ವಹಿಸಿರುವ ಗೋವುಗಳ ಪಾಲನೆ ಅಗತ್ಯ ಮತ್ತು ಅನಿವಾರ್ಯ ವಾಗಿದೆ. ಈ ನಿಟ್ಟಿನಲ್ಲಿ ಗೋಶಾಲೆಗಳನ್ನು ಸರಿಯಾದ ರೀತಿಯಲ್ಲಿ ಬೆಳೆಸುವ ಮತ್ತು ಉಳಿಸುವ ಹೊಣೆ ಎಲ್ಲರ ಮೇಲಿದೆ ಸರಕಾರ ಗೋಶಾಲೆಗಳಿಗೆ ಸರಿಯಾದ ಸಹಕಾರ ನೀಡಿ ಉಳಿಸಬೇಕು ಎಂಬುದು ಎಲ್ಲರ ಆಗ್ರಹ

Related posts

Leave a Reply