Breaking News

ನೂತನ ಪೊಲೀಸ್ ಆಯುಕ್ತರಾಗಿ ಎನ್.ಸತೀಶ್ ನೇಮಕ

ಮಂಗಳೂರು: ನಗರ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದ ಎಮ್. ಚಂದ್ರಶೇಖರ್ ಅವರು ಬೆಂಗಳೂರು ಅಪರಾಧ, ತನಿಖಾ ಮತ್ತು ಆರ್ಥಿಕ ವಿಭಾಗಗಳ ಐಜಿಪಿಯಾಗಿ ವರ್ಗಾಯಿಸಲಾಗಿದೆ. ಐಪಿ‌ಎಸ್ ಅಧಿಕಾರಿ ಎನ್.ಸತೀಶ್‌ಕುಮಾರ್ ಅವರನ್ನು ನೂತನ ಆಯುಕ್ತರನ್ನಾಗಿ ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ.
2003ರ ಐಪಿ‌ಎಸ್ ಬ್ಯಾಚ್‌ನವರಾದ ಎನ್.ಸತೀಶ್‌ಕುಮಾರ್ ಅವರು ಕೆ‌ಎಸ್‌ಆರ್‌ಟಿಸಿ ಬೆಂಗಳೂರಿನಲ್ಲಿ ಡಿ‌ಐಜಿ ಗ್ರೇಡ್ ಹುದ್ದೆಯಲ್ಲಿ ಕಾರ್ಯನಿರ್ವಹಿ ಸುತ್ತಿದ್ದು, ಈ ಹಿಂದೆ ಚರ್ಚ್ ದಾಳಿ ಸಂದರ್ಭದಲ್ಲಿ ಸತೀಶ್‌ಕುಮಾರ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿಯೂ ಕರ್ತವ್ಯ ನಿಭಾಯಿಸಿದ್ದಾರೆ. ಮಂಗಳೂರು ಇವರಿಗೆ ಪರಿಚಿತ ಪ್ರದೇಶವೇ ಆಗಿದೆ.
ತಮಿಳುನಾಡು ಮೂಲದವರಾದ ಸತೀಶ್‌ಕುಮಾರ್ ಈ ಹಿಂದೆ ಬೀದರ್ ಜಿಲ್ಲೆಯ ಎಸ್‌ಪಿ ಹಾಗೂ ಬೆಂಗಳೂರು ನಗರದಲ್ಲಿ ಡಿಸಿಪಿ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಇನ್ನು ಜಿಲ್ಲೆ ಕಂಡ ಉತ್ತಮ ಪೊಲೀಸ್ ಅಧಿಕಾರಿಗಳ ಪಟ್ಟಿಯಲ್ಲಿ ತಮ್ಮನ್ನು ತಾವು ಗುರುತಿಸಿ ಕೊಂಡು ಮಂಗಳೂರು ನಗರ ಕಮೀಷನರೇಟ್ ಕಂಡ ಜನಮೆಚ್ಚಿದ ಪ್ರಾಮಾ ಣಿಕ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಎಮ್.ಚಂದ್ರಶೇಖರ್.

Related posts

Leave a Reply