Header Ads
Header Ads
Header Ads
Breaking News

ನೂತನ ಸ್ವರ್ಣಾಭರಣ ಮಳಿಗೆ “ಸಪ್ತ” ಜುವೆಲ್ಸ್ ಶುಭಾರಂಭ ವಿಟ್ಲ-ಪುತ್ತೂರು ಎಂಪಾಯರ್ ಮಾಲ್‌ನಲ್ಲಿ ಉದ್ಘಾಟನೆ

 

ವಿಟ್ಲದ ಪುತ್ತೂರು ರಸ್ತೆಯಲ್ಲಿರುವ ಎಂಪಾಯರ್ ಮಾಲ್‌ನಲ್ಲಿ ನೂತನ ಸ್ವರ್ಣಾಭರಣ ಮಳಿಗೆಯಾದ “ಸಪ್ತ” ಜುವೆಲ್ಸ್ ಶುಭಾರಂಭಗೊಂಡಿದೆ.

ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಮಾಜಿ ಪ್ರಧಾನ ಅರ್ಚಕ ಬ್ರಹ್ಮಶ್ರೀ ವೇದಮೂರ್ತಿ ಕೇಶವ ಜೋಗಿತ್ತಾಯರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಿತು.

ಚಿನ್ನಾಭರಣ ಮಳಿಗೆಯ ಪ್ರಥಮ ಶಾಖೆ ಇದಾಗಿದೆ. ಕಳೆದ ಮೂರು ವರ್ಷದಿಂದ ರುಚಿಕರ ಹಾಗೂ ಗುಣಮಟ್ಟದ ಆಹಾರೋತ್ಪನ್ನಗಳ ಮೂಲಕ “ಸಪ್ತ ವೆಂಚರ್ಸ್ ಸಂಸ್ಥೆಯನ್ನು ನಡೆಸಿಕೊಂಡು ಕಾಸರಗೋಡು, ಉತ್ತರ ಕನ್ನಡ, ಹಾಸನ ಜಿಲ್ಲೆಗಳಿಗೆ ಸರಬರಾಜು ಮಾಡುತ್ತಿದ್ದ ಸಂಸ್ಥೆಯ ಅಂಗಸಂಸ್ಥೆಯಾಗಿ ಈ “ಸಪ್ತ ಜುವೆಲ್ಲರಿ” ಮಳಿಗೆಯನ್ನು ಪ್ರಾರಂಭಿಸಿದೆ. 2014 ರ ಅಕ್ಟೋಬರ್ ೩ರಂದು ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದಲ್ಲಿ ಆರಂಭಗೊಂಡ ಸಂಸ್ಥೆ ತನ್ನ ಉತ್ಕೃಷ್ಟ ಉತ್ಪನ್ನಗಳಿಂದ ಜನಮನ್ನಣೆಗಳಿಸಿದೆ.

ಇದೀಗ ನೂತನವಾಗಿ ಪ್ರಾರಂಭಗೊಂಡ ಈ ಮಳಿಗೆಯಲ್ಲಿ ಸೇವೆಯಲ್ಲಿ ನುರಿತ ಆಡಳಿತಗಾರರಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ವಿಶೇಷ ವಿನ್ಯಾಸಗಳನ್ನು ಈ ಮಳಿಗೆಯಲ್ಲಿ ಲಭ್ಯವಿದೆ. ಗ್ರಾಹಕರು ಆಯ್ಕೆ ಮಾಡುವ ವಿನ್ಯಾಸದ ಆಭರಣಗಳನ್ನು ವಿಶೇಷ ಮುತುವರ್ಜಿಯಲ್ಲಿ ಕ್ಲಪ್ತ ಸಮಯಕ್ಕೆ ತಯಾರಿಸಿ ಕೊಡಲಾಗುತ್ತಿದೆ. ಡಿಸೆಂಬರ್ 31 ರೊಳಗೆ ಅದೃಷ್ಟ ಕೂಪನ್ ಭರ್ತಿ ಮಾಡುವ ಯೋಜನೆ ಇದೆ. ಆರಂಭಿಕ ಕೊಡುಗೆಯಾಗಿ ವಿಶೇಷ ರಿಯಾಯಿತಿಗಳನ್ನು ಗ್ರಾಹಕರಿಗೆ ನೀಡುತ್ತಿದೆ. ಗ್ರಾಹಕರಿಗೆ ಅತ್ಯುತ್ತಮವಾದುದನ್ನು ನೀಡುವುದೇ ಈ ಸಂಸ್ಥೆಯ ಉದ್ದೇಶವಾಗಿದೆ.

ಈ ಸಂದರ್ಭ ಸಂಸ್ಥೆಯ ಅಜಕ್ಕಳ ಶ್ಯಾಮ್ ಭಟ್, ಗೋವಿಂದರಾಜ್ ಭಟ್ ಕಲ್ಲಮಜಲು, ದೇವಿಪ್ರಸಾದ ಚಂಗಪ್ಪಾಡಿ, ಶಿವಪ್ರಕಾಶ ಭಟ್ ಪಂಜಿಬಲ್ಲೆ, ಕೃಷ್ಣ ಪ್ರಸಾದ್ ಭಟ್ ಕಡವ, ಸುದರ್ಶನ ಕುಮಾರ್ ಇರ್ಕ್ಲಾಜೆ, ಪ್ರಶಾಂತ ಸರಳಾಯ ಹಾಗೂ ಸುಕುಮಾರ ಭಟ್ ಕಲ್ಲಮಜಲು ಉಪಸ್ಥಿತರಿದ್ದರು.
ವರದಿ: ಮಹಮ್ಮ್ದ್ ಆಲಿ ವಿಟ್ಲ

Related posts

Leave a Reply