Header Ads
Header Ads
Breaking News

ನೃತ್ಯ ನಿರೂಪಣೆಯನ್ನೊಳಗೊಂಡ ಪುಣ್ಯಭೂಮಿ ಭಾರತ ಜ.14 ರಂದು ಮಂಗಳೂರಿನ ಪುರಭವನದಲ್ಲಿ ಉದ್ಘಾಟನೆ ಸನಾತನ ನಾಟ್ಯಾಲಯದಿಂದ ಕಾರ್ಯಕ್ರಮ

ಮಂಗಳೂರಿನ ಸನಾತನ ನಾಟ್ಯಾಲಯದಿಂದ ಭಾರತದ ನದಿ ಪರಂಪರೆ, ಪುಣ್ಯ ಕ್ಷೇತ್ರಗಳು ಹಾಗೂ ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿಯನ್ನು ಜಾಗೃತಿ ಮೂಡಿಸುವ ಹಾಡು ನೃತ್ಯ ನಿರೂಪಣೆಯನ್ನೊಳಗೊಂಡ ವಿನೂತನ ಪ್ರಸ್ತುತಿ ಪುಣ್ಯಭೂಮಿ ಭಾರತ ಜನವರಿ 14 ರಂದು ಮಂಗಳೂರಿನ ಪುರಭವನದಲ್ಲಿ ಬಿಡುಗಡೆಗೊಳ್ಳಲಿದೆ.

ಈ ಬಗ್ಗೆ ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಸನಾತನ ನಾಟ್ಯಾಲಯದ ನಿರ್ದೇಶಕರಾದ ಚಂದ್ರಶೇಖರ್ ಕೆ. ಶೆಟ್ಟಿಯವರ ನಿರ್ದೇಶನದಲ್ಲಿ ಬೆಂಗಳೂರಿನ ವಿವಿ ಗೋಪಾಲ್ ರವರ ಸಾಹಿತ್ಯ ರಚನೆಯ ಶಂಕರ್ ಶಾನುಭೋಗ್ ಅವರ ಸಂಗೀತ ನಿರ್ದೇಶನದ ಪುಣ್ಯಭೂಮಿ ಭಾರತ ನುಡಿ ನಾದ ನಾಟ್ಯಾಮೃತದ ನೃತ್ಯ ನಿರ್ದೇಶನವನ್ನು ಕಲಾಶ್ರೀ ಶಾರದಾ ಮಣಿ ಶೇಖರ್, ವಿದುಶಿ ಶ್ರೀಲತಾ ನಾಗರಾಜ್ ಶುಭಾಮಣಿ ಚಂದ್ರಶೇಖರ್ ಗೈದಿದ್ದು, ನಿರೂಪಣೆಯನ್ನು ಕಾರ್ಕಳದ ಆದರ್ಶ ಗೋಖಲೆಯವರು ಮಾಡಲಿದ್ದಾರೆ. ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾದ ಎನ್. ವಿನಯ್ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿಶ್ರಾಂತ ರಾಜ್ಯಪಾಲರಾದ ನ್ಯಾಯಮೂರ್ತಿ ಎಂ. ರಾಮ ಜೋಯಿಸಲು ಪುಣ್ಯಭೂಮಿ ಭಾರತವನ್ನು ಬಿಡುಗಡೆಗೊಳಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭ ಮಾಧ್ಯಮಗೋಷ್ಠಿಯಲ್ಲಿ ಸನಾತನ ನಾಟ್ಯಾಲಯದ ಚಂದ್ರಶೇಖರ್ ಕೆ. ಶೆಟ್ಟಿ, ಆದರ್ಶ ಗೋಖಲೆ, ವಿದೂಷಿ ಶಾರದಾಮಣಿ ಶೇಖರ್ ಉಪಸ್ಥಿತರಿದ್ದರು.
ವರದಿ: ಶರತ್

Related posts