Header Ads
Header Ads
Header Ads
Breaking News

ನೃತ್ಯ ಸಂಧ್ಯಾ ಕಾರ್ಯಕ್ರಮ ಸಸಿ ನೆಟ್ಟು ವೃಕ್ಷ ಅಭಿಯಾನ ಉದ್ಘಾಟನೆ ಪಾಣೆಮಂಗಳೂರು ಪ್ರಾಥಮಿಕ ಶಾಲೆಯಲ್ಲಿ ಆಯೋಜನೆ

ಶ್ರೀ ದೇವಿ ನೃತ್ಯಾರಾಧನಾ ಕಲಾ ಕೆಂದ್ರ ಪುತ್ತೂರು ಇದರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದೊಂದಿಗೆ ನೃತ್ಯ ಸಂಧ್ಯಾ ಕಾರ್ಯಕ್ರಮ ಭಾನುವಾರ ಸಂಜೆ ಪಾಣೆಮಂಗಳೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. 

ಸಸ್ಯಪೋಷಣೆ, ಸಂರಕ್ಷಣೆ ಮೂಲಕ ರಾಜ್ಯಾದ್ಯಂತ ಮನೆಮಾತಾಗಿರುವ ಶತಾಯುಷಿ ಡಾ. ಸಾಲುಮರದ ತಿಮ್ಮಕ್ಕ ನೃತ್ಯಸಂಭ್ರಮ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷಣೆಯ ಸಲುವಾಗಿ ಆಯೋಜಿಸಿದ ವೃಕ್ಷ ಅಭಿಯಾನ ಕಾರ್ಯಕ್ರಮವನ್ನು ಸಸಿ ನೆಟ್ಟು ಉದ್ಘಾಟಿಸಿದರು. ಬಳಿಕ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ಸಂದರ್ಭ ಸುಮಾರು 150 ವಿದ್ಯಾರ್ಥಿಗಳಿಗೆ ಸಸಿ ವಿತರಿಸಿದ ಅವರು, ಪ್ರತಿಯೊಬ್ಬ ಮಕ್ಕಳಿಗೂ ಕೇವಲ ಗಿಡ ನೆಡುವುದಲ್ಲ, ಅದನ್ನು ಸಾಕಿ ಸಲಹಬೇಕು ಎಂಬ ಕಿವಿಮಾತು ಹೇಳಿದರು. 
ನೃತ್ಯಕೇಂದ್ರದ ವಿದ್ಯಾರ್ಥಿಗಳಿಂದ ನೃತ್ಯ ಸಂಧ್ಯಾ ಕಾರ್ಯಕ್ರಮ ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಅರ್ಚಕ ಶ್ರೀ ವೆಂಕಟರಮಣ ಆಸ್ರಣ್ಣ ಆಶೀರ್ವಚನ ನೀಡಿ ಭರತನಾಟ್ಯವೊಂದು ದೈವೀ ಕಲೆ, ಇದರಲ್ಲಿ ಇತರ ನೃತ್ಯ ಪ್ರಕಾರದಂತೆ ಆವಿಷ್ಕಾರಕ್ಕೆ ಅವಕಾಶವಿಲ್ಲ. ಅದನ್ನು ಶಾಸ್ತ್ರಬದ್ದವಾಗಿ ಕಲಿತು ಗುರುವಿನ ಆಶೀರ್ವಾದ ಪಡೆದು ದೇವರ ಅನುಗ್ರಹದಿಂದ ಸಿದ್ದಿಸಿಕೊಳ್ಳಬೇಕು ಎಂದರು. 
ಕಾರ್ಯಕ್ರಮದಲ್ಲಿ ವೃಕ್ಷಮಾತೆ ನಾಡೋಜ ಡಾ. ಸಾಲುಮರದ ತಿಮ್ಮಕ್ಕ, ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ, ಭರತನಾಟ್ಯ ಗುರು ನಯನ ಸತ್ಯನಾರಾಯಣ ಅವರನ್ನು ಸನ್ಮಾನಿಸಲಾಯಿತು. ರಾಜ್ಯ ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಹರೀಂದ್ರ ಪೈ, ಪರಿಸರ ಪ್ರೇಮಿ ಮಾಧವ ಉಳ್ಳಾಲ, ಎಸ್‌ವಿಎಸ್ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕ ವೆಂಕಟ್ರಾಯ ಪ್ರಭು ಉಪಸ್ಥಿತರಿದ್ದರು. ಕಲಾಕೇಂದ್ರ ಸಂಚಾಲಕ ಉದಯ್ ವೆಂಕಟೇಶ್, ನೃತ್ಯ ನಿರ್ದೇಶಕಿ ರೋಹಿಣಿ ಉದಯ್ ಹಾಜರಿದ್ದರು.
ವರದಿ: ಸಂದೀಪ್ ಬಂಟ್ವಾಳ

Related posts

Leave a Reply