Header Ads
Header Ads
Header Ads
Breaking News

ನೆನೆಗುದಿಗೆ ಬಿದ್ದಿದ್ದ ಪರಿಯಾಲ್ತಡ್ಕ ರಸ್ತೆಗೆ ಕೊನೆಗೂ ಮುಕ್ತಿ ಮರುಡಾಮರೀಕರಣದೊಂದಿಗೆ ಹೊಸ ರೂಪು ಶಾಸಕಿ ಶಕುಂತಲಾ ಶೆಟ್ಟಿ ಗುದ್ದಲಿಪೂಜೆ

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ವಿಟ್ಲದ ಬದನಾಜೆ-ಕುಂಡಡ್ಕ-ಪರಿಯಾಲ್ತಡ್ಕ ರಸ್ತೆಗೆ ಕೊನೆಗೂ ಮರುಡಾಮರೀಕರಣ ಭಾಗ್ಯ ದೊರಕಿದೆ. ವಿಟ್ಲದ ಬದನಾಜೆ ಹಾಗೂ ಪರಿಯಾಲ್ತಡ್ಕದಲ್ಲಿ ಶಾಸಕಿ ಶಕುಂತಳಾ ಟಿ ಶೆಟ್ಟಿಯವರು ಗುದ್ದಲಿಪೂಜೆ ನೆರವೇರಿಸಿದರು.

ಈ ಸಂದರ್ಭ ಮಾತನಾಡಿದ ಅವರು ಕೆಲವರು ಈ ರಸ್ತೆಯ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ ಎನ್ನುವ ವಿಚಾರ ನನಗೆ ತಿಳಿಯಿತು. ಪ್ರತಿಭಟನೆ ಮಾಡುವವರು ಮಾಡುತ್ತಲೇ ಇರಲಿ ಅದಕ್ಕೆಲ್ಲ ಜಗ್ಗುವವಳು ನಾನಲ್ಲ ಎಂದು ಹೇಳಿದರು.


ಈ ಸಂದರ್ಭದಲ್ಲಿ ಪಿಡಬ್ಲ್ಯೂಡಿ ಎಡಬ್ಲ್ಯೂ ಇಂಜಿನಿಯರ್ ಉಮೇಶ್ ಭಟ್, ಇಂಜಿನಿಯರ್ ಪ್ರೀತಂ, ಕೊಳ್ನಾಡು ಕ್ಷೇತ್ರದ ಜಿ.ಪಂ ಸದಸ್ಯ ಎಂ ಎಸ್ ಮೊಹಮ್ಮದ್,ತಾ.ಪಂ ಸದಸ್ಯೆ ವನಜಾಕ್ಷಿ, ಮೊದಲಾದವರು ಉಪಸ್ಥಿತರಿದ್ದರು.

ವರದಿ: ಮಹಮ್ಮದ್ ಆಲಿ, ವಿಟ್ಲ

Related posts

Leave a Reply