Header Ads
Header Ads
Breaking News

ನೆರೆ ಪರಿಹಾರಕ್ಕೆ ಉಪಚುನಾವಣೆಯಿಂದ ಅಡ್ಡಿ ಆಗಲ್ಲ : ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

ನೆರೆ ಪರಿಹಾರ ಕಾರ್ಯಕ್ಕೆ ಉಪ ಚುನಾವಣೆಯಿಂದ ಅಡ್ಡಿಯಾಗಲ್ಲ. 20 ಕ್ಕೂ ಹೆಚ್ಚು ಜಿಲೆಗಳಲ್ಲಿ ಪ್ರವಾಹ ಮೊದಲೇ ಬಂದಿತ್ತು. ಈಗ ಮತ್ತೆ ಮೂರು ದಿನಗಳಿಂದ ಮಳೆಯಾಗುತ್ತಿದೆ. ಅನುದಾನ ಬಿಡುಗಡೆ ಮಾಡಲು ಸರ್ಕಾರ ಬದ್ಧವಾಗಿದೆ ಅಂತ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಉಡುಪಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ನೆರೆ ಪರಿಹಾರದಿಂದ ರಾಜ್ಯ ಸರ್ಕಾರ ಸ್ವಲ್ಪವೂ ಹಿಂದೆ ಸರಿದಿಲ್ಲ. ಉಸ್ತುವಾರಿ ಮಂತ್ರಿಗಳು, ಶಾಸಕರು ಸ್ವತ: ಸಿಎಂ ಕಾರ್ಯೋನ್ಮುಖರಾಗಿದ್ದಾರೆ. ಪ್ರವಾಹ ಸಂತ್ರಸ್ಥರಿಗೆ ಭಯ ಬೇಡ ಎಂದರು. ಮಹಾರಾಷ್ಟ್ರ ಹರಿಯಾಣ ಉತ್ತಮ ಗೆಲುವು ಸಾಧಿಸಿದ್ದೇವೆ.ಎರಡೂ ರಾಜ್ಯದಲ್ಲಿ ಪೂರ್ಣ ಬಹುಮತದ ಸರ್ಕಾರ ಮಾಡ್ತೇವೆ.ಬಿಜೆಪಿಯೇ ಸರ್ಕಾರ ರಚಿಸುತ್ತೆ ಯಾವುದೇ ಗೊಂದಲ ಬೇಡ.ರಾಜ್ಯ ಉಪಚುನಾವಣೆಯ್ಲೂ ಬಿಜೆಪಿ ಗೆಲುವು ಪಡೆಯುತ್ತೆ.ಎಲ್ಲಾ ಹದಿನೈದು ಸ್ಥಾನದಲ್ಲಿ ಬಿಜೆಪಿ ಗೆಲುವು ಖಚಿತ ಎಂದರು.

Related posts

Leave a Reply

Your email address will not be published. Required fields are marked *