Header Ads
Header Ads
Breaking News

ನೆರೆ ವೀಕ್ಷಣೆ ಮಾಡಲು ಪ್ರಧಾನಮಂತ್ರಿಗೆ ಟೈಮ್ ಇಲ್ವಾ? ಮಾಜಿ ಸಚಿವ ರಮಾನಾಥ ರೈ ವ್ಯಂಗ್ಯ

ನೆರೆ ಪರಿಸ್ಥಿತಿ ನಿಭಾಯಿಸೋದು ರಾಜ್ಯದ ಜೊತೆಗೆ ಕೇಂದ್ರದ ಹೊಣೆಗಾರಿಕೆ. ನೆರೆ ವೀಕ್ಷಣೆ ಮಾಡಲು ಪ್ರಧಾನಮಂತ್ರಿಗೆ ಟೈಮ್ ಇಲ್ವಾ? ಅಂತ ಮಾಜಿ ಸಚಿವ ರಮಾನಾಥ ರೈ ವ್ಯಂಗ್ಯವಾಡಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, ಮೋದಿ ಸರ್ಕಾರ ಪ್ರಚಾರದಲ್ಲೇ ಮಗ್ನವಾಗಿದೆ. ಬಿಜೆಪಿ ಜನಹಿತದ ಕಡೆ ಗಮನ ಕೊಡ್ತಾ ಇಲ್ಲ. ಮೋದಿಯ ಮಾರ್ಕೆಟಿಂಗ್ ಮಾಡುವ ಬಗ್ಗೆ ಮಾತ್ರ ತಲೆಕೆಡಿಸಿಕೊಂಡಿದೆ ಎಂದರು. ಭೂತಾನ್‌ಗೆ ಹೋಗಿ ಮಕ್ಕಳ ಬೆನ್ನುತಟ್ಟಿದ್ರೆ ದೊಡ್ಡ ಸುದ್ದಿಯಾಗುತ್ತದೆ. ಪ್ರವಾಹ ಪೀಡಿತ ಜನರ ಕಣ್ಣೀರು ಒರೆಸುವುದು ಅವರ ಆದ್ಯತೆಯಾಗಬೇಕಿತ್ತು. ಬುದ್ದಿವಂತರ ಜಿಲ್ಲೆಯಲ್ಲಿ ಯೋಗ್ಯ ಇಬ್ಬರನ್ನು ಮಂತ್ರಿ ಮಾಡುವುದಕ್ಕೆ ಬಿಜೆಪಿಗೆ ಸಾದ್ಯ ಆಗಿಲ್ಲ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬುದ್ದಿವಂತರು ಯಾರು ಇಲ್ಲ ಎಂದು ತೀರ್ಮಾನಿಸಿದ್ದಾರೆ. ಎರಡು ಜಿಲ್ಲೆಗಳನ್ನು ಕಡೆಗಣಿಸಿದ್ದಾರೆ ಎಂದ್ರು. 

 

Related posts

Leave a Reply

Your email address will not be published. Required fields are marked *