Header Ads
Header Ads
Breaking News

ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ಸಹಾಯ. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯಿಂದ ಸೈಕಲ್ ರ್‍ಯಾಲಿ . ಮಂಜೇಶ್ವರದಲ್ಲಿ ಜಾಥಾ ಮೂಲಕ ಜನ ಜಾಗೃತಿ.

ಮಂಜೇಶ್ವರ: ಮುಖ್ಯ ಮಂತ್ರಿಯವರ ನೆರೆ ಸಂತ್ರಸ್ತರ ನಿಧಿಗೆ ಸಹಾಯಧನ ಸಂಗ್ರಹಿಸುವ ಉದ್ದೇಶದಿಂದ ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಎ ಶ್ರೀನಿವಾಸ್ ರವರು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸೈಕಲ್ ರ್‍ಯಾಲಿ ಅಯೋಜಿಸಿದರು.ಜಿಲ್ಲೆಯ ಸೈಕಲಿಂಗ್ ಒಕ್ಕೂಟದ ಸಹಕಾರದಿಂದ ರ್‍ಯಾಲಿಯನ್ನು ಸಂಘಟಿಸಲಾಗಿತ್ತು. ಜಲಪ್ರಳಯದಿಂದ ಈಗಾಗಲೇ ಹಲವು ಕುಟುಂಬಗಳು ಬೀದಿ ಪಾಲಾಗಿದ್ದು ಅವರಿಗೆ ನೆರವನ್ನು ನೀಡುವ ಉದ್ದೇಶದಿಂದ ನಡೆಸಿದ ಸೈಅಕಲ್ ರಾಲಿಗೆ ಭಾರೀ ಜನ ಬೆಂಬಲ ದೊರೆತಿದೆ.

ಚೆರ್ವತ್ತೂರಿನಿಂದ ಅರಂಭಗೊಂಡ ಸೈಕಲ್ ರಾಲಿ ಉಪ್ಪಳದಲ್ಲಿ ಸಮಾಪ್ತಿಗೊಂಡಿತು. ಇದೇ ವೇಳೆ ಮಾತನಾಡಿದ ಪೊಲೀಸ್ ವರಿಷ್ಟಾಧಿಕಾರಿ ಡಾ,.ಎ ಶ್ರೀನಿವಾಸ್ ರವರು ಜನ ಜಾಗೃತಿ ಪ್ರಕೃತಿಯ ವಿಕೋಪದಿಂದ ಇಂದು ಕೇರಳದ ಜನತೆ ಕಂಗಾಲಾಗಿದ್ದಾರೆ. ಇವರಿಗೆ ಸಹಾಯ ಹಸ್ತವನ್ನು ನೀಡುವುದು ನಮ್ಮೆಲ್ಲರ ಕರ್ತವ್ಯ ನಮ್ಮ ಸಹೋದರ ಸಹೋದರಿಯರಾದ ನಾವು ಸಹಾಯ ಮಾಡಲು ಮುಖ್ಯ ಮಂತ್ರಿಯವರ ನೆರೆ ಸಂತ್ರಸ್ತ ಪರಿಹಾರ ನಿಧಿಗೆ ಸಹಾಯ ಧನ ನೀಡುವ ಮೂಲಕ ಒಂದಾಗೋಣ ಎಂದು ಹೇಳಿದರು.ಈ ಸಂದರ್ಭ ಚೆರ್ವತ್ತೂರಿನಲ್ಲಿ ಶಾಸಕ ಎಂ ರಾಜಗೋಪಾಲನ್ ಸೇರಿದಂತೆ ಹಲವು ಪ್ರಮುಖರು ಪಾಲ್ಗೊಂಡರು.

Related posts

Leave a Reply