Header Ads
Header Ads
Breaking News

ನೆಲ್ಯಾಡಿ ಚೆಕ್ ಪೋಸ್ಟ್‌ನಲ್ಲಿ ಅರಣ್ಯ ರಕ್ಷಕನಿಗೆ ಹಲ್ಲೆ .ಲಾರಿ ತಪಾಸಣೆ ವೇಳೆ ನಡೆದ ಘಟನೆ.

ಪುತ್ತೂರು: ಮರದ ಕಟ್ಟಿಗೆಗಳನ್ನು ಹೇರಿಕೊಂಡು ಹೋಗುತ್ತಿದ್ದ ಲಾರಿಯನ್ನು ತಪಾಸಣೆ ಮಾಡಲು ಮುಂದಾದ ಅರಣ್ಯರಕ್ಷಕನಿಗೆ ಲಾರಿ ಚಾಲಕರು ಸೇರಿದಂತೆ ಮೂವರು ಹಲ್ಲೆ ನಡೆಸಿದ ಘಟನೆ ನೆಲ್ಯಾಡಿ ಚೆಕ್ ಪೋಸ್ಟ್‌ನಲ್ಲಿ ಆಗಸ್ಟ್ 1 ರಂದು ರಾತ್ರಿ ನಡೆದಿದೆ.ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯ ಶಿರಾಡಿ ಭಾಗದ ಅರಣ್ಯ ರಕ್ಷಕ ಬೆಳ್ತಂಗಡಿ ನಿವಾಸಿ ರಾಜೇಶ್ ಗಾಯಗೊಂಡವರು. ಅವರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ನಾನು ರಾತ್ರಿ ವೇಳೆ ನೆಲ್ಯಾಡಿ ಚೆಕ್ ಪೋಸ್ಟ್ ನಲ್ಲಿ ಸಿಬಂದಿ ಜೊತೆ ಕರ್ತವ್ಯ ನಿರ್ವಹಿಸುತ್ತಿರುವ ವೇಳೆ ಸುಬ್ರಹ್ಮಣ್ಯ ಮಾರ್ಗವಾಗಿ ಸಕಲೇಶಪುರಕ್ಕೆ ಮರದ ಕಟ್ಟಿಗೆಗಳನ್ನು ಹೇರಿಕೊಂಡು ಹೋಗುತ್ತಿದ್ದ ಲಾರಿ ಪರೀಶಿಲಿಸಲು ಮುಂದಾಗಿದ್ದೆ. ಈ ವೇಳೆ ಲಾರಿ ಚಾಲಕ ನಿಮಗೆ ಪರವಾಣಿಗೆ ತೋರಿಸುವ ಅಗತ್ಯವಿಲ್ಲ ಎಂದು ಹೇಳಿದ್ದಲ್ಲದೆ ಅವರ ಜೊತೆಗಿದ್ದ ಇಬ್ಬರು ಹಾಗು ಚಾಲಕ ನನಗೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದವರ ಮುಖ ಪರಿಚಯ ಇದೆ. ಅವರೆಲ್ಲಾ ಟಿಂಬರ್ ಮರ್ಚಂಟ್ ಕೆ.ಕೆ.ಅಬೂಬಕ್ಕರ್ ಅವರ ಕಡೆಯವರು ಎಂದು ಗಾಯಾಳು ರಾಜೇಶ್ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

Related posts

Leave a Reply