Header Ads
Header Ads
Breaking News

ನೆಲ್ಯಾಡಿ ಬಾಲ ಯೇಸುವಿನ ಪ್ರಾರ್ಥನಾ ಮಂದಿರ ಸ್ವತಂತ್ರ ದೇವಾಲಯವಾಗಿ ಘೋಷಣೆ

ಉಪ್ಪಿನಂಗಡಿ: ಮಂಗಳೂರು ಧರ್ಮ ಪ್ರಾಂತ್ಯ ವ್ಯಾಪ್ತಿಯಲ್ಲಿದ್ದ, ನೆಲ್ಯಾಡಿಯ ಬಾಲ ಯೇಸು ಪ್ರಾರ್ಥನಾ ಮಂದಿರ ಎ. 1ರಿಂದ ಸ್ವತಂತ್ರ ದೇವಾಲಯವಾಗಿ ಕಾರ್‍ಯ ನಿರ್ವಹಿಸಲಿದೆ ಎಂದು ಧರ್ಮಪ್ರಾಂತ್ಯದ ಬಿಷಪ್ ಡಾ| ಅಲೋಶಿಯಸ್ ಪಾವ್ಲ್ ಡಿ’ಸೋಜಾ ಘೋಷಣೆ ಮಾಡಿದ್ದಾರೆ.

ಕೊಕ್ಕಡ ಚರ್ಚ್ ಸಹಾಯಕ ಧರ್ಮಗುರು ಫಾ| ಸ್ಟ್ಯಾನಿ ಫೆರ್ನಾಂಡಿಸ್ ಅವರು ನೆಲ್ಯಾಡಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ 2000 ಇಸವಿಯಲ್ಲಿ ಕೊಕ್ಕಡ ಚರ್ಚ್ ಧರ್ಮಗುರುಗಳಾಗಿ ಬಂದಂತಹ ಧರ್ಮಗುರು ವಲೇರಿಯನ್ ಲೂಯಿಸ್ ಹಾಗೂ ಅಂದಿನ ಕೊಕ್ಕಡ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷರಾಗಿದ್ದ ವಿನ್ಸೆಂಟ್ ಮಿನೇಜಸ್ ನಾಯಕತ್ವದಲ್ಲಿ ನೆಲ್ಯಾಡಿಯಲ್ಲಿ ಪ್ರತ್ಯೇಕ ಜಾಗವನ್ನು ಖರೀದಿಸಲಾಗಿ, 2005ರಲ್ಲಿ ಬಾಲ ಯೇಸುವಿನ ಪ್ರಾರ್ಥನಾ ಮಂದಿರವಾಗಿ ಘೋಷಿಸಲಾಗಿತ್ತು.ಕೊಕ್ಕಡ ಧರ್ಮ ಕೇಂದ್ರದಲ್ಲಿ ಸುಮಾರು 23 ಧರ್ಮಗುರುಗಳು ಹಾಗೂ ಇಬ್ಬರು ಸಹಾಯಕ ಧರ್ಮಗುರುಗಳು ಸೇವೆ ಸಲ್ಲಿಸುತ್ತಿದ್ದಾರೆ. 210 ಕೆಥೋಲಿಕ್ ಕುಟುಂಬಗಳಿರುವ ಕೊಕ್ಕಡ ದೇವಾಲಯ ವ್ಯಾಪ್ತಿಯು ನೆಲ್ಯಾಡಿ ತನಕ ವಿಸ್ತರಿಸಿದೆ. ಕೊಕ್ಕಡ ಚರ್ಚ್‌ಗೆ ಸೇರಿದ 10 ವಾಳೆಗಳಿದ್ದು, 4ವಾಳೆಗಳು ನೆಲ್ಯಾಡಿ ಪ್ರಾರ್ಥನಾ ಮಂದಿರಕ್ಕೆ ಸೇರಿದ್ದು, ಕೊಕ್ಕಡ ಚರ್ಚ್ ಅಧೀನದಲ್ಲಿದೆ ಅವರು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಕೊಕ್ಕಡ ಚರ್ಚ್ ಧರ್ಮಗುರು ಫಾ| ಫೆಡ್ರಿಕ್ ಮೊಂತೇರೊ, ನೆಲ್ಯಾಡಿ ಚರ್ಚ್ ಸಮಿತಿ ಸಂಚಾಲಕ ತೋಮಸ್ ಡಿ’ಸೋಜಾ, ಕಾರ್‍ಯದರ್ಶಿ ಜೋನ್ ಮೊಂತೇರೊ, ಕೊಕ್ಕಡ ಚರ್ಚ್ ಪಾಲನಾ ಸಮಿತಿ ಮಾಜಿ ಉಪಾಧ್ಯಕ್ಷ ವಿನ್ಸೆಂಟ್ ಮಿನೇಜಸ್, ನೆಲ್ಯಾಡಿ ಕೊನ್ವೆಂಟ್‌ನ ತೆರೆಜಾ ಕ್ರಾಸ್ತಾ ಉಪಸ್ಥಿತರಿದ್ದರು.