Header Ads
Header Ads
Header Ads
Breaking News

ನೇಜಿ ನಾಟಿ ಮಾಡಿದ ಆಹಾರ ಸಚಿವ ವಿದ್ಯಾರ್ಥಿಗಳೊಂದಿಗೆ ಗದ್ದೆಗಿಳಿದ ಯು.ಟ.ಖಾದರ್

 


ನೇಜಿ ನಾಟಿ ಮಾಡುತ್ತಿದ್ದ ವಿದ್ಯಾರ್ಥಿಗಳೊಂದಿಗೆ ಆಹಾರ ಸಚಿವ ಯು.ಟಿ.ಖಾದರ್ ಅವರೂ ಗದ್ದೆಗಳಿದು ಸುಮಾರು ಅರ್ಥ ತಾಸು ಕಾಲ ನೇಜಿ ನಾಟಿ ಮಾಡುವ ಮೂಲಕ ಗಮನ ಸೆಳದರು. ಕೊಣಾಜೆ ಸಮೀಪದ ಅಣ್ಣೆರೆ ಪಾಲು ಗದ್ದೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರೈತ ಸಂಘ ಹಸಿರು ಸೇನೆಯ ಮಾರ್ಗದರ್ಶನದಲ್ಲಿ ಮಂಗಳೂರಿನ ರಥಬೀದಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಂದ “ ವಿದ್ಯಾರ್ಥಿಗಳ ನಡಿಗೆ ಹಡಿಲು ಭೂಮಿಯ ಕಡೆಗೆ ಕಾರ್ಯಕ್ರಮದ ಭಾಗವಾಗಿ ನೇಜಿ ನಾಟಿ ಕಾರ್ಯ ನಡೆಯಿತು. ಇನ್ನೂ ವಿದ್ಯಾರ್ಥಿಗಳ ಕೃಷಿ ಕಾರ್‍ಯ ವೀಕ್ಷಣೆಗೆ ಬಂದ ಸಚಿವ ಖಾದರ್ ಕೂಡ ವಿದ್ಯಾರ್ಥಿಗಳಿಗೆ ಸಾಥ್ ನೀಡಿದರು. ಸುಮಾರು ಅರ್ಧ ಗಂಟೆ ಕಾಲ ಎಪಿ‌ಎಂಸಿ ಉಪಾಧ್ಯಕ್ಷೆ ಮುತ್ತು ಎನ್.ಶೆಟ್ಟಿ ಮಾರ್ಗದರ್ಶನದಲಿ ಖಾದರ್ ನಾಟಿ ಮಾಡಿದರು. ಇದಕ್ಕೆ ಸ್ಥಳೀಯ ರಾಜಕೀಯ ಮುಖಂಡರು, ಹಿರಿಯರೂ ಕೂಡ ಸಾಥ್ ನೀಡಿದರು.

Related posts

Leave a Reply