Header Ads
Header Ads
Breaking News

ನೇಣುಬಿಗಿದು ಯುವಕ ಆತ್ಮಹತ್ಯೆ : ಮಣಿಪಾಲ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ

ಮನೆಯ ಜಂತಿಗೆ ನೇಣು ಬಿಗಿದು, ಯುವಕನೊರ್ವನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಣಿಪಾಲ ಠಾಣಾ ವ್ಯಾಪ್ತಿಯ ಪ್ರಗತಿನಗರ 3ನೇ ತಿರುವಿನಲ್ಲಿ ನಡೆದಿರುವುದು ಸೋಮವಾರ ಬೆಳಕಿಗೆ ಬಂದಿದೆ. 

ಮೃತ ಯುವಕ ಸುಚೀಂದ್ರ (26) ಪ್ರಗತಿನಗರ, ಉದ್ಯಾವರ ಬಲಾಯಿಪಾದೆಯಲ್ಲಿ ಇರುವ, ಜನತಾ ಟಯರ್ ವರ್ಕ್ಸನಲ್ಲಿ ದುಡಿಯುತ್ತಿದ್ದವನೆಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ಜೀವನದಲ್ಲಿ ಜಿಗುಪ್ಸೆ ಕಾರಣವಾಗಿರ ಬಹುದೆಂದು ಶಂಕಿಸಲಾಗಿದೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಪ್ರಗತಿಯಲ್ಲಿದೆ. ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಶವವನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲು ಉಚಿತ ಅಂಬುಲೇನ್ಸು ಸೇವೆ ನೀಡಿ ಇಲಾಖೆಗೆ ಸಹಕರಿಸಿದ್ದಾರೆ.

Related posts

Leave a Reply

Your email address will not be published. Required fields are marked *