Header Ads
Header Ads
Header Ads
Breaking News

ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ ಅನಾರೋಗ್ಯ ಮತ್ತು ಸಾಲಬಾಧೆಯಿಂದ ನೊಂದು ಆತ್ಮಹತ್ಯೆ ಬೆಳ್ಳಿಪಾಡಿಯ ಕೋಡಿಂಬಾಡಿ ಎಂಬಲ್ಲಿ ಘಟನೆ

ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ಳಿಪ್ಪಾಡಿ ಗ್ರಾಮದ ಕೋಡಿಂಬಾಡಿ ಎಂಬಲ್ಲಿ ನಡೆದಿದೆ. ಕೋಡಿಂಬಾಡಿ ದಿ. ರಘುರಾಮ ಶೆಟ್ಟಿ ಅವರ ಪುತ್ರ ಜಯಪ್ರಕಾಶ್ ಶೆಟ್ಟಿ(41) ಆತ್ಮಹತ್ಯೆ ಮಾಡಿಕೊಂಡವರು. ಜಯಪ್ರಕಾಶ್ ಶೆಟ್ಟಿಯವರು ಕೋಡಿಂಬಾಡಿಯಲ್ಲಿ ಕ್ಯಾಂಟೀನ್ ನಡೆಸಿಕೊಂಡಿದ್ದರು.

ಕೆಲವು ಸಮಯಗಳಿಂದ ಅನಾರೋಗ್ಯದಿಂದ ಮತ್ತು ಸಾಲ ಬಾದೆಯಿಂದಾಗಿ ನೊಂದು ಮನೆಯ ಸಮೀಪದ ಹಲಸಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ತಾಯಿ ಸರೋಜಿನಿ, ಪತ್ನಿ ಗೀತಾ, ಪುತ್ರಿಯರಾದ ಲಲಿತಾ, ಅಂಕಿತಾ, ಪುತ್ರ ಅಕ್ಷಯ್ ಹಾಗೂ ಸಹೋದರರನ್ನು ಅಗಲಿದ್ದಾರೆ. ಮೃತರ ಸಹೋದರ ವಿದ್ಯಾಪ್ರಸಾದ್ ನೀಡಿರುವ ದೂರಿನಂತೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

Leave a Reply