Header Ads
Header Ads
Header Ads
Breaking News

ನೇಣು ಬಿಗಿದ ಸ್ಥಿತಿಯಲ್ಲಿ ನವವಿವಾಹಿತನ ಶವ ಕಾರ್ಕಳದ ಕುಕ್ಕುಂದೂರು ಪಿಲಿಚಂಡಿ ಸ್ಥಾನದ ಬಳಿ ಪತ್ತೆ

ನೇಣು ಬಿಗಿದ ಸ್ಥಿತಿಯಲ್ಲಿ ನವವಿವಾಹಿತನ ಶವ ಕಾರ್ಕಳ ತಾಲೂಕಿನ ಕುಕ್ಕುಂದೂರು ಪಿಲಿಚಂಡಿ ಸ್ಥಾನದ ಬಳಿ ಪತ್ತೆಯಾಗಿದೆ. ಕುಕ್ಕುಂದೂರು ನಿವಾಸಿಯಾದ ಮೋಹನ್ ಎಂಬಾತನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಈತನಿಗೆ ಕಳೆದ ಒಂದು ವಾರದ ಹಿಂದೆ ಮದುವೆಯಾಗಿತ್ತು. ಇಂದು ಬೆಳಗ್ಗೆ ಪಿಲಿಚಂಡಿ ಸ್ಥಾನದ ಬಳಿಯಲ್ಲಿ ಮರದ ಚಿಕ್ಕ ರೆಂಬೆಗೆ ನೇಣು ಹಾಕಿದ ಸ್ಥಿತಿಯಲ್ಲಿದ್ದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮನೆಯೊಳಗೆ ಕೊಲೆ ಮಾಡಿ ಮನೆಯ ಹಿಂಬದಿ ಗೇರು ಮರಕ್ಕೆ ತಂದು ನೇಣು ಹಾಕಿದ್ದು. ಮನೆಯಿಂದ ಶವವನ್ನು ಹೊರಗೆ ಎಳೆದ ತಂದ ಕುರುಹುಗಳು ಪತ್ತೆಯಾಗಿದೆ. ಅಲ್ಲದೆ ಮೃತನ ಬಲ ಕೈಯಲ್ಲಿ ರಕ್ತ ಚಿಮ್ಮುತ್ತಿದ್ದು ಕತ್ತಿಯಿಂದ ಕಡಿದ ಗಾಯಗಳು ಪತ್ತೆಯಾಗಿದೆ ಮನೆಯಲ್ಲಿ ಜಯಶ್ರೀ ಮಾವ ಹಾಗೂ ಗಂಡ ಮೂವರೇ ವಾಸಿಸುತ್ತಿದ್ದರು. ಇದೀಗನಗರ ಠಾಣೆ ಪೋಲಿಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related posts

Leave a Reply