Header Ads
Header Ads
Header Ads
Header Ads
Header Ads
Header Ads
Breaking News

ನೇತ್ರಾವತಿಯಲ್ಲಿ ಪ್ರವಾಹವೇರುವ ಅಪಾಯ : ಸುಣ್ಣದಗೂಡು ಪ್ರದೇಶದ ಜನರನ್ನು ಸ್ಥಳಾಂತರ

ಬಂಟ್ವಾಳ: ನೇತ್ರಾವತಿಯಲ್ಲಿ ಪ್ರವಾಹವೇರುವ ಅಪಾಯ ಇರುವ ಕಾರಣ ಗುರುವಾರ ರಾತ್ರಿ ಬಂಟ್ವಾಳದ ಪಾಣೆಮಂಗಳೂರು ಶಾರದಾ ಪ್ರೌಢಶಾಲೆಯಲ್ಲಿರುವ ಗಂಜಿಕೇಂದ್ರಕ್ಕೆ ನೇತ್ರಾವತಿ ತೀರದಲ್ಲಿರುವ ಸುಣ್ಣದಗೂಡು ಪ್ರದೇಶದ ಸುಮಾರು80ಕ್ಕೂ ಅಧಿಕ ಜನರನ್ನು ರಾತ್ರಿ ಸುಮಾರು 9.45ರ ವೇಳೆ ಸ್ಥಳಾಂತರಿಸಲಾಗಿದೆ. ಇವರಲ್ಲಿ ಕಾರ್ಮಿಕರು, ಅವರ ಕುಟುಂಬದವರು ಇದ್ದಾರೆ.

ಮುಂಜಾಗರೂಕತಾ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ತಿಳಿಸಿದ್ದಾರೆ. ಪುರಸಭೆ ಅಧಿಕಾರಿಗಳು, ಕಂದಾಯಾಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು. ನೆರೆ ಸಂತ್ತಸ್ತರಿಗೆ ಬೇಕಾಗುವ ಅಗತ್ಯ ವಸ್ತುಗಳನ್ನು ಪುರೈಸಲಾಯಿತು. ಬೆಳಿಗ್ಗೆ ಚಹಾ ಹಾಗೂ ಉಪಾಹಾರವನ್ನು ಒದಗಿಸಲಾಯಿತು.

Related posts

Leave a Reply

Your email address will not be published. Required fields are marked *