Header Ads
Header Ads
Breaking News

ನೇತ್ರಾವತಿ-ಕುಮಾರಧಾರ ನದಿಗಳ ರೌದ್ರಾವತಾರ . ಉಭಯ ನದಿಗಳ ನೆರೆಯಿಂದಾಗಿ ಹಲವು ಪ್ರದೇಶಗಳು ಜಲಾವೃತ.

ಉಪ್ಪಿನಂಗಡಿ: ಕಳೆದ ದಿನವಷ್ಟೇ ಶಾಂತವಾಗಿದ್ದ ನೇತ್ರಾವತಿ- ಕುಮಾರಧಾರ ನದಿಗಳು ಗುರುವಾರ ಮತ್ತೆ ರೌದ್ರಾವತಾರ ತೋರಿದ್ದು, ಉಪ್ಪಿನಂಗಡಿಯಲ್ಲಿ ಉಕ್ಕೇರಿ ಹರಿಯುತ್ತಿವೆ. ಇಂದು ಮತ್ತೊಮ್ಮೆ ಸಂಗಮವಾಗುವುದರೊಂದಿಗೆ ಇತಿಹಾಸದಲ್ಲಿ ಪ್ರಥಮವೆಂಬಂತೆ ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ಸನ್ನಿಧಿಯಲ್ಲಿ ಉಭಯ ನದಿಗಳು ಈ ಬಾರಿ ಎರಡು ಬಾರಿ ಸಂಗಮವಾಗಿದೆ. ಉಭಯ ನದಿಗಳ ನೆರೆ ನೀರಿನಿಂದಾಗಿ ಹಲವು ಪ್ರದೇಶಗಳು ಜಲಾವೃತವಾಗಿವೆ.ನೇತ್ರಾವತಿ ನದಿ ದಡದಲ್ಲಿರುವ ವನಭೋಜನದ ಶ್ರೀ ವೀರಾಂಜನೇಯ ದೇವಸ್ಥಾನ ಜಲಾವೃತಗೊಂಡಿದ್ದು, ಆ ಪರಿಸರದಲ್ಲಿ ನದಿ ನೀರು ಆವರಿಸಿದೆ. ರಥ ಬೀದಿ ಪರಿಸರದಲ್ಲಿ ಹಲವು ಮನೆಗಳಿದ್ದು, ಅಲ್ಲಿನವರಿಗೆ ನೆರೆ ಭೀತಿ ಆವರಿಸಿದೆ. ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಬದಿಯಿಂದಲೂ ನದಿ ನೀರು ರಥಬೀದಿಯನ್ನು ಆವರಿಸುತ್ತಿದೆ. ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯ ರಸ್ತೆ ಜಲಾವೃತಗೊಂಡಿದೆ. ಇಲ್ಲಿ ಅಂಗಡಿ, ಗ್ಯಾರೇಜ್, ಕ್ಯಾಂಟೀನ್, ಮನೆಗಳ ಒಳಗೆ ನೀರು ಪ್ರವೇಶಿಸಿದೆ. ಇದೇ ರಸ್ತೆಯಲ್ಲಿರುವ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಆವರಣವನ್ನೂ ಕೂಡಾ ನೆರೆ ನೀರು ಆವರಿಸಿದೆ. ಕೆಂಪಿಮಜಲು, ಸೂರಪ್ಪ ಕೌಂಪಾಂಡ್, ನಟ್ಟಿಬೈಲ್, ರಂಗಾಜೆ ಪರಿಸರವೂ ಜಲಾವೃತಗೊಂಡಿದೆ.ಹಳೆಗೇಟಿನಲ್ಲಿರುವ ಅರಫಾ ವಿದ್ಯಾಕೇಂದ್ರವು ನೆರೆಗೆ ಸಿಲುಕಿದ್ದು, ಇಲ್ಲಿನ ಬೆಂಚು, ಡೆಸ್ಕ್‌ಗಳು ನೆರೆ ನೀರಿನಲ್ಲಿ ಕೊಚ್ಚಿಹೋಗಿವೆ. ಹಳೆಗೇಟಿನ ಕಂಚಿಬೆಟ್ಟಿನ ಬಳಿ ವಸತಿ ಸಂಕೀರ್ಣ ಹಾಗೂ ಮನೆಗಳಿಗೆ ನೆರೆ ನೀರು ನುಗ್ಗಿದ್ದು, ಅವರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ.

Related posts

Leave a Reply