Header Ads
Header Ads
Header Ads
Breaking News

ನೇತ್ರಾವತಿ ನದಿಗೆ ಹಾರಿ ಯುವಕ ಆತ್ಮಹತ್ಯೆ : ಕೋಟೆಪುರ ಸಮುದ್ರ ತೀರದಲ್ಲಿ ಪತ್ತೆಯಾದ ಮೃತದೇಹ

ಯುವ ಉದ್ಯಮಿ ಉಳ್ಳಾಲದ ನೇತ್ರಾವತಿ ಸೇತುವೆಗೆ ಹಾರಿ ಆತ್ಮಹತ್ಯೆ ನಡೆಸಿದ ಘಟನೆ ಇಂದು ಮುಂಜಾನೆ ವೇಳೆ ನಡೆದಿದೆ. ಸುಮಾರು 1 ಗಂಟೆಯ ಕಾರ್ಯಾಚರಣೆಯ ಬಳಿಕ ಮೃತದೇಹ ಮೃತದೇಹ ಕೋಟೆಪುರ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.ಕುತ್ತಾರು ನಿವಾಸಿ ಮಹಾಬಲ ಕೊಟ್ಟಾರಿ ಎಂಬವರ ಪುತ್ರ ನವೀಶ್ ಕೊಟ್ಟಾರಿ(28) ಆತ್ಮಹತ್ಯೆಗೈದವರು. ಪ್ರಸ್ತುತ ಉಳ್ಳಾಲಬೈಲಿನಲ್ಲಿ ವಾಸವಿದ್ದ ಇಂದು ಬೆಳಗ್ಗಿನ ಜಾವ ಮನೆಯಿಂದ ಬೈಕಿನಲ್ಲಿ ಹೊರಟವರು, ನೇತ್ರಾವತಿ ಸೇತುವೆಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುತ್ತಾರು ಬಳಿ ಶಾಮಿಯಾನ ಅಂಗಡಿ, ನೀರಿನ ಟ್ಯಾಂಕರ್ ವ್ಯವಹಾರ ನಡೆಸುತ್ತಿದ್ದರು. ಗುರುವಾರ ರಾತ್ರಿಯಿಂದಲೇ ಮಂಕಾಗಿದ್ದರು, ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ ನಡೆಸಿರುವ ಶಂಕೆ ಇದೆ. ನವೀಶ್ ಅವಿವಾಹಿತರಾಗಿದ್ದು, ತಾಯಿ, ತಂದೆ, ಇಬ್ಬರು ಸಹೋದರರನ್ನು ಅಗಲಿದ್ದಾರೆ.

Related posts

Leave a Reply

Your email address will not be published. Required fields are marked *