Breaking News

ನೇತ್ರಾವತಿ ನದಿ ಸೇತುವೆಯಿಂದ ಜಿಗಿಯಲು ಯತ್ನಿಸಿದ ಭೂಪ, ಹಾರಲು ಯತ್ನಿಸಿದ ವ್ಯಕ್ತಿಯನ್ನ ರಕ್ಷಿಸಿದ ಸಾರ್ವಜನಿಕರು

ವ್ಯಕ್ತಿಯೋರ್ವ ಸೇತುವೆಯಿಂದ ನದಿಗೆ ಜಿಗಿಯಲು ಯತ್ನಿಸಿದ ಘಟನೆ ಉಳ್ಳಾಲ ನೇತ್ರಾವತಿ ಹಳೇ ಸೇತುವೆಯಲ್ಲಿ ಗುರುವಾರ ಸಂಜೆ ವೇಳೆ ನಡೆದಿದೆ.
ಇನ್ನು ಹಾರಲು ಯತ್ನಿಸಿದಾತನನ್ನು ಇಬ್ರಾಹಿಂ ಎಂದು ಗುರುತಿಸಲಾಗಿದೆ. ಸಂಜೆ ವೇಳೆ ಸೇತುವೆ ಸಮೀಪ ಬಟ್ಟೆ ಕಳಚಿ ನಿಂತಿದ್ದ ಈತ ಏಕಾಏಕಿ ಸೇತುವೆಯಿಂದ ನದಿಗೆ ಹಾರಲು ಯತ್ನಿಸಿದ್ದ. ಇದನ್ನು ಕಂಡ ವಾಹನ ಸವಾರರು ಕೂಡಲೇ ವಾಹನಗಳನ್ನು ನಿಲ್ಲಿಸಿ, ಹಾರಲು ಯತ್ನಿಸಿದವನನ್ನು ತಡೆದಿದ್ದರು. ಆದರೂ ಜಿಗಿಯಲು ಮುಂದಾದಾಗ ಕೆಳಗುರುಳಿಸಿ ೧೦೮ ಆಂಬ್ಯುಲೆನ್ಸ್ ಗೆ ಕರೆ ಮಾಡಿದರು. ಆದರೆ ಇಬ್ರಾಹಿಂ ಮಾನಸಿಕ ಅಸ್ವಸ್ಥನಂತೆ ಕಂಡುಬಂದಿದ್ದರಿಂದಾಗಿ, ೧೦೮ ಸಿಬ್ಬಂದಿ ಕೊಂಡೊಯ್ಯಲು ಹಿಂದೇಟು ಹಾಕಿದರಾದರೂ, ಬಳಿಕ ಸಾರ್ವಜನಿಕರ ಒತ್ತಾಯಕ್ಕೆ ಮಣಿದು ವೆನ್ಲಾಕ್ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಿದ್ದಾರೆ. ಘಟನೆಯಿಂದಾಗಿ ರಾ.ಹೆ.೬೬ರ ಸೇತುವೆ ಭಾಗದಲ್ಲಿ ೧ ಗಂಟೆಯ ಕಾಲ ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು.ಬಳಿಕ ಉಳ್ಳಾಲ ಪೊಲೀಸರು ಸ್ಥಳಕ್ಕಾಗಮಿಸಿ ತೆರವುಗೊಳಿಸಿದರು.

Related posts

Leave a Reply