Header Ads
Breaking News

ನೇಪಾಳದಲ್ಲಿ ನಡೆದ ವಿಶ್ವ ತ್ರೋಬಾಲ್, ಮಹಿಳೆ, ಪುರುಷ ಎರಡೂ ವಿಭಾಗಗಳಲ್ಲಿ ಭಾರತಕ್ಕೆ ಚಿನ್ನ

ಅಪೂರ್ವ ಸಾಮರ್ಥ್ಯ ತೋರಿದ ಭಾರತದ ಪುರುಷರ ಮತ್ತು ಮಹಿಳೆಯರ ತಂಡದವರು ನೇಪಾಳದ ಕಠ್ಮಂಡುವಿನಲ್ಲಿ ನಡೆದ ವಿಶ್ವ ಕ್ರೀಡಾ ಕೂಟದ ಥ್ರೋಬಾಲ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದು ಚಾರಿತ್ರಿಕ ಸಾಧನೆ ಮಾಡಿದ್ದಾರೆ.
ಮಹಿಳೆಯರ ವಿಭಾಗದ ಫೈನಲ್ನಲ್ಲಿ ಭಾರತ ತಂಡ ೧೫-೧೩, ೧೫-೧೨ರಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಪರಾಭವಗೊಳಿಸಿತು. ಇದಕ್ಕೂ ಮುನ್ನ ನಡೆದಿದ್ದ ಸೆಮಿಫೈನಲ್ ಹಣಾಹಣಿಯಲ್ಲಿ ೧೫-೧೦, ೧೫-೧೧ರಲ್ಲಿ ಮಲೇಷ್ಯಾ ತಂಡವನ್ನು ಸೋಲಿಸಿ ವಿಶ್ವಾಸ ಹೆಚ್ಚಿಸಿಕೊಂಡಿದ್ದ ಭಾರತದ ವನಿತೆಯರು ಫೈನಲ್ನಲ್ಲೂ ಅಮೋಘ ಆಟದ ಮೂಲಕ ಗಮನ ಸೆಳೆದರು. ಪುರುಷರ ವಿಭಾಗದಲ್ಲಿ ಭಾರತ ತಂಡದವರು ೧೫-೧೩, ೧೫-೧೨ರಲ್ಲಿ ಬಾಂಗ್ಲಾದೇಶ ವಿರುದ್ಧ ಗೆದ್ದರು. ಸೆಮಿಫೈನಲ್ನಲ್ಲಿ ಭಾರತದ ಪುರುಷರು ೧೫-೯, ೧೫-೧೦ರಲ್ಲಿ ಮಲೇಷ್ಯಾವನ್ನು ಸ