Breaking News

ನೇಪಾಳ ಕಾಂಗ್ರೆಸ್‌ನ ದೇವುಬಾ, ನಾಲ್ಕನೆಯ ಬಾರಿ ಪ್ರಧಾನಿಯಾಗಿ ಆಯ್ಕೆ

ನೇಪಾಳದ ಕಾಂಗ್ರೆಸ್ ಅಧ್ಯಕ್ಷ ಶೇರ್ ಬಹಾದ್ದೂರ್ ದೇವುಬಾ ಅವರು ನಾಲ್ಕನೆಯ ಬಾರಿ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
ವಿರೋಧ ಪಕ್ಷ ಯು‌ಎಂಎಲ್ ಸೇರಿದಂತೆ ಯಾವುದೇ ಪಕ್ಷ ತಮ್ಮ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದ ಕಾರಣ, ೭೦ ವರ್ಷದ ಶೇರ್ ಬಹದ್ದೂರ್ ಅವರು ಏಕೈಕ ಅಭ್ಯರ್ಥಿಯಾಗಿದ್ದರು. ೫೯೩ ಸಂಸತ್ ಸದಸ್ಯರ ಪೈಕಿ ೫೫೮ ಮಂದಿ ಮತ ಚಲಾಯಿಸಿದರು. ಶೇರ್ ಬಹದ್ದೂರ್ ಅವರು ಜಯಗಳಿಸಲು ೨೯೭ ಮತಗಳು ಸಾಕಿತ್ತು. ಆದರೆ ಅವರು ೩೮೮ ಮತ ಪಡೆದಿದ್ದಾರೆ. ೧೯೯೫-೧೯೯೭, ೨೦೦೧-೨೦೦೨, ೨೦೦೪-೨೦೦೫ರವರೆಗೆ ಪ್ರಧಾನಿಯಾಗಿದ್ದ ಶೇರ್ ಬಹದ್ದೂರ್ ಇದೀಗ ಮತ್ತೆ ನೇಪಾಳದ ಪ್ರಧಾನಿಯಾಗಿದ್ದಾರೆ.

Related posts

Leave a Reply