Header Ads
Header Ads
Breaking News

ನೋಯೆಲ್ ಮೈಕೆಲ್ ಸಲ್ಡಾನ್ಹರ ಆಸ್ತಿ ದಾಖಲೆ ಪತ್ರ ಅಡವಿಟ್ಟು ವಂಚನೆ : ಪಿಯುಸಿಎಲ್ ನಿಂದ ತನಿಖೆ ನಡೆಸುವಂತೆ ಒತ್ತಾಯ

ಫರಂಗಿಪೇಟೆ ನಿವಾಸಿ ನೋಯೆಲ್ ಮೈಕೆಲ್ ಸಲ್ದಾನ್ಹ ಎಂಬವರ ಮನೆ ಹಾಗೂ ಆಸ್ತಿ ದಾಖಲೆಯನ್ನು ಅವರ ಗಮನಕ್ಕೆ ತಾರದೆ ಬ್ಯಾಂಕ್‌ನಲ್ಲಿ ಅಡವಿಟ್ಟು ಇಬ್ಬರು ವ್ಯಕ್ತಿಗಳು ಬ್ಯಾಂಕ್‌ನಿಂದ ಭಾರೀ ಸಾಲ ಪಡೆದು ವಂಚಿಸಿದ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಲಾಗುತ್ತಿದೆ. ಪೊಲೀಸ್ ಇಲಾಖೆ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸಬೇಕು. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಕಡತಗಳನ್ನು ಪೊಲೀಸ್ ಇಲಾಖೆಗೆ ಈಗಾಗಲೇ ನೀಡಲಾಗಿದ್ದು, ಅವೆಲ್ಲವನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂದು ಪಿಯುಸಿಎಲ್ ಸಂಸ್ಥೆ ಒತ್ತಾಯಿಸಿದೆ. ಮಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಿಯುಸಿಎಲ್‌ನ ದ.ಕ. ಜಿಲ್ಲಾಧ್ಯಕ್ಷ ಈಶ್ವರ ರಾಜ್ ಮಾತನಾಡಿ, ಪ್ರಕರಣ ನ್ಯಾಯಾಲಯದಲ್ಲಿ ಸಾಬೀತಾಗುವವರೆಗೆ ಸಂತ್ರಸ್ತ ನೋಯೆಲ್ ಅವರ ಮನೆ ಹಾಗೂ ಆಸ್ತಿಯನ್ನು ಹರಾಜು ಹಾಕಬಾರದು. ಆರೋಪಿಗಳು ಇನ್ನೂ ಹಲವರಿಗೆ ಈ ರೀತಿ ವಂಚನೆ ಮಾಡಿದ್ದು, ಭವಿಷ್ಯದಲ್ಲಿ ಮತ್ತಷ್ಟು ಮಂದಿ ವಂಚನೆಗೀಡಾಗುವುದನ್ನು ತಪ್ಪಿಸಲು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದರು.
ಸುದ್ಧಿಗೋಷ್ಠಿಯಲ್ಲಿ ಪಿಯುಸಿಎಲ್ ಮುಖಂಡರಾದ ಪಿ.ಬಿ.ಡೇಸಾ, ಅಜಯ್ ಡಿಸಿಲ್ವ, ಸಂತ್ರಸ್ತ ನೋಯೆಲ್ ಸಲ್ದಾನ್ಹ, ಅವರ ತಂದೆ ಜಾನ್ ಸಲ್ದಾನ್ಹ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *