Header Ads
Header Ads
Breaking News

ನ.11 ರಂದು ಪುತ್ತೂರು ಜಿಲ್ಲಾ ರಚನೆಗೆ ಹಕ್ಕೊತ್ತಾಯಿಸಿ ಸಮಾಲೋಚನಾ ಸಭೆ

ಪುತ್ತೂರು:ಪುತ್ತೂರು ಸೇರಿದಂತೆ 5 ತಾಲೂಕುಗಳಿಗೆ ಉತ್ತಮ ಆಡಳಿತ ನೀಡುವಲ್ಲಿ ಹೆಚ್ಚು ಅನುಕೂಲವಾಗುವಂತೆ ’ಪುತ್ತೂರು ಜಿಲ್ಲಾ ರಚನೆಗೆ ಹಕ್ಕೊತ್ತಾಯ’ ಮಾಡುವ ನಿಟ್ಟಿನಲ್ಲಿ ನವೆಂಬರ್ರಂ11ದು ಬೆಳಿಗ್ಗೆ 11ಗಂಟೆಗೆ ನ್ಯಾಯಾಲಯದ ಸಂಕೀರ್ಣದಲ್ಲಿರುವ ಪರಾಶರ ಸಭಾಭವನದಲ್ಲಿ ಸಮಾಲೋಚನಾ ಸಭೆ ನಡೆಯಲಿದೆ ಎಂದು ಉದ್ಯಮಿ ಅಶೋಕ್ ರೈ ಕೋಡಿಂಬಾಡಿ ತಿಳಿಸಿದರು.

ಪುತ್ತೂರಿನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪುತ್ತೂರು, ಸುಳ್ಯ, ಬೆಳ್ತಂಗಡಿ, ವಿಟ್ಲ ಹಾಗೂ ಕಡಬವನ್ನು ಸೇರಿಸಿಕೊಂಡು ಪುತ್ತೂರು ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಹೋರಾಟ ನಡೆಸಲು ಜಿಲ್ಲಾ ಹೋರಾಟ ಸಮಿತಿಯನ್ನು ರಚನೆ ಮಾಡಲಾಗುವುದು. ಈ ಹಿಂದೆ ಸಿಟಿಜನ್ ಫಾರಂ ನೇತೃತ್ವದಲ್ಲಿ ಹಲವಾರಿ ಬಾರಿ ಜಿಲ್ಲೆ ರಚನೆಗಾಗಿ ಮನವಿ ನೀಡುವ ಪ್ರಕ್ರಿಯೆಗಳು ನಡೆಸಲಾಗುತ್ತಿತ್ತು. ಆದರೆ ಇದಕ್ಕೆ ಸರಕಾರದಿಂದ ಯಾವುದೇ ಸ್ಪಂಧನೆ ಸಿಕ್ಕಿಲ್ಲ. ಆಡಳಿತದ ದೃಷ್ಠಿಯಿಂದ ಪುತ್ತೂರು ಕೇಂದ್ರ ಸ್ಥಳವಾಗಿದ್ದು, ಸುಮಾರು 8,78,907 ಜನಸಂಖ್ಯೆ ಈ ಭಾಗದಲ್ಲಿದೆ. 4028 ಕಿ.ಮೀ ವಿಸ್ತೀರ್ಣ ಇದ್ದು, ಪುತ್ತೂರನ್ನು ಜಿಲ್ಲೆಯಾಗಿಸಲು ಬೇಕಾದ ಅರ್ಹತೆ ಇದೆ ಎಂದವರು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಹಿರಿಯ ನ್ಯಾಯವಾದಿ ರಾಮಮೋಹನ್ ರಾವ್, ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಭಾಸ್ಕರ್ ಕೋಡಿಂಬಾಳ, ಬೆಂಗಳೂರಿನ ಕರಾವಳಿ ಕಲಾ ಪ್ರತಿಷ್ಠಾನದ ಸತೀಶ್ ರೈ ನೀರ್ಪಾಡಿ ಹಾಗೂ ಬಡೆಕ್ಕಿಲ ಪ್ರದೀಪ್ ಉಪಸ್ಥಿತರಿದ್ದರು.
ವರದಿ: ಅನೀಶ್ ಪುತ್ತೂರು

Related posts

Leave a Reply