Header Ads
Header Ads
Breaking News

ನ.4 ರಂದು ಮಾಂಬಾಡಿ ಶಿಷ್ಯ ಸಮಾವೇಶ

ಗುರುಶ್ರೇಷ್ಠ ಮಾಂಬಾಡಿಯವರ ಶಿಕ್ಷಣ ಕೈಂಕರ್ಯಕ್ಕೆ ಐವತ್ತು ತುಂಬಿದ ಹಿನ್ನಲೆಯಲ್ಲಿ ಹೊನ್ನ ಹಬ್ಬದ ಈ ವರ್ಷ ಅಭಿಮಾನಿ ಶಿಷ್ಯರೆಲ್ಲ ಒಟ್ಟು ಸೇರಿ ಸಂಭ್ರಮಿಸುವ ಆಶಯದೊಂದಿಗೆ ಮಾಂಬಾಡಿ ಶಿಷ್ಯ ಸಮಾವೇಶವನ್ನು ನವೆಂಬರ್ 4ರಂದು ಮಂಗಳೂರಿನ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಬೆಳಿಗ್ಗೆ9ಗಂಟೆಯಿಂದ ಆರಂಭಗೊಳ್ಳುವ ಕಾರ್ಯಕ್ರಮ ವೈವಿಧ್ಯ ರಾತ್ರಿ 8.30ಕ್ಕೆ ಸಂಪನ್ನಗೊಳ್ಳಲಿದೆ. ಪೂರ್ವರಂಗ ಹಾಡುಗಳು ಪೀಠಿಕೆ, ಹವ್ಯಾಸಿ ಹಾಗೂ ವೃತ್ತಿಪರ ಹಿಮ್ಮೇಳ ಕಲಾವಿದರ ಹಾಡುಗಾರಿಕೆ, ತಾಳಮದ್ದಲೆ, ಮತ್ತು ಯಕ್ಷಗಾನ ಬಯಲಾಟ ನಡೆಯಲಿದೆ. ಎಡನೀರು ಸ್ವಾಮೀಜಿ ಹಾಗೂ ಇತರ ಗಣ್ಯರ ಸಮ್ಮುಖದಲ್ಲಿ ಗುರುವಂದನಾ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ರಮೇಶ್, ಗಣೇಶ್ ಕರ್ಕೆರಾ ಉಪಸ್ಥಿತರಿದ್ದರು

Related posts

Leave a Reply