Header Ads
Header Ads
Breaking News

ನ.1ಕ್ಕೆ‘ಮಂಗಳೂರು ಟು ಗೋವಾ’ ಕೊಂಕಣಿ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ

ರುಧಿರಾ ಫಿಲಂಸ್ ಬ್ಯಾನರ್‍ನಲ್ಲಿ ತಯಾರಾದ ಕೊಂಕಣಿ ಚಿತ್ರ ‘ಮಂಗಳೂರು ಟು ಗೋವಾ’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ನವೆಂಬರ್ 1ರಂದು ಮಂಗಳೂರಿನ ವೆಲೆನ್ಸಿಯಾದ ಗೋಲ್ಡನ್ ಜುಬ್ಲಿ ಹಾಲ್‍ನಲ್ಲಿ ನಡೆಯಲಿದೆ ಅಂತ ಚಿತ್ರದ ಪ್ರೊಡ್ಯುಸರ್ ವಿನ್ಸಂಟ್ ಡಿಸೋಜಾ ಹೇಳಿದ್ರು.

ಅವರು ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಚಿತ್ರದಲ್ಲಿ ನಾಯಕನಟನಾಗಿ ಗೋಡ್ವಿನ್ ಸ್ಪಾರ್ಕಲ್ ನಟಿಸಿದ್ದು, ಈ ಚಿತ್ರಕ್ಕೆ ಪ್ಯಾಟ್ಸನ್ ಪಿರೇರಾ ಸಂಗೀತ ನಿರ್ದೇಶಕರಾಗಿದ್ದಾರೆ. ಅರ್ಮಾನ್ ಮಲಿಕ್, ನಕಾಸ್ ಅಜೀಜ್, ನಿಹಾಲ್ ತಾವ್ರೋ, ತೋಸೆಫ್ ಮತ್ಯಾಸ್ ಚಿತ್ರದ ಗಾಯಕರಾಗಿದ್ದಾರೆ. ಹಾಗೂ ವಿಲ್ಸನ್ ಕಟೀಲ್, ಜೆರಿ ಬೋಂದೆಲ್, ನೀಲ್ ರಿಸ್ಕಿನ್ಹಾ, ಗಣಿದೇವಿ ಸಾಹಿತ್ಯ ನೀಡಿದ್ದಾರೆ ಎಂದು ಹೇಳಿದ್ರು. ಸುದ್ದಿಗೋಷ್ಟಿಯಲ್ಲಿ ಚಿತ್ರದ ಪ್ರೊಡ್ಯುಸರ್ ಮೆಲ್ವಿನ್ ವಿಲ್ರ್ಫೆಡ್ ಪಿಂಟೋ, ಸಂಗೀತ ನಿರ್ದೇಶಕ ಪ್ಯಾಟ್ಸನ್ ಪಿರೇರಾ, ಹೀರೋ ಗೋಡ್ವಿನ್ ಸ್ಪಾರ್ಕಲ್, ಸಹ ನಿರ್ಮಾಪಕರಾದ ರೋನ್ಸ್ ಲಂಡನ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *