Header Ads
Header Ads
Breaking News

ನ.10: ಈಶ್ವರಮಂಗಲದಲ್ಲಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಮತ್ತು ಹಗ್ಗಜಗ್ಗಾಟ

ಪುತ್ತೂರು : ಈಶ್ವರಮಂಗಲದ ಹನುಮಗಿರಿ ನವಚೇತನ ಮಿತ್ರವೃಂದದ ಆಶ್ರಯದಲ್ಲಿ ಹೊನಲು ಬೆಳಕಿನ `ಪಂಚಮುಖಿ ಟ್ರೋಫಿ’ ಅಂತರ್‍ರಾಜ್ಯ ಮಟ್ಟದ ಆಹ್ವಾನಿತ ತಂಡಗಳ ಮ್ಯಾಟ್ ಕಬಡ್ಡಿ ಪಂದ್ಯಾಟ ಮತ್ತು 510 ಕೆಜಿ ವಿಭಾಗದ ಮುಕ್ತ ಹಗ್ಗಜಗ್ಗಾಟ ಸ್ಪರ್ಧೆ ನ. 10ರಂದು ಸಂಜೆ 4 ಗಂಟೆಗೆ ನಡೆಯಲಿದೆ ಎಂದು ನವಚೇತನ ಮಿತ್ರವೃಂದದ ಗೌರವಾಧ್ಯಕ್ಷ ಡಾ.ಶ್ರೀಕುಮಾರ್ ಕತ್ರಿಬೈಲು ಅವರು ತಿಳಿಸಿದರು.ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಬಡ್ಡಿ ಪಂದ್ಯಾಟದಲ್ಲಿ ಆಹ್ವಾನಿತ ಕರ್ನಾಟಕ ಮತ್ತು ಕೇರಳ ರಾಜ್ಯದ 14 ತಂಡಗಳು ಭಾಗವಹಿಸಲಿದೆ.

ಪ್ರಥಮ ಸ್ಥಾನ ಪಡೆದ ತಂಡಕ್ಕೆ ರೂ.10,018 , ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ.8018, ತೃತೀಯ ಬಹುಮಾನ ರೂ.6018 ಮತ್ತು ಚತುರ್ಥ ಬಹುಮಾನ ರೂ.4018 ಹಾಗೂ ಈ ನಗದು ಬಹುಮಾನಗಳ ಜತೆಗೆ ಟ್ರೋಫಿ ನೀಡಲಾಗುವುದು. ಉತ್ತಮ ರೈಡರ್, ಉತ್ತಮ ಆಲ್‍ರೌಂಡರ್ ,ಉತ್ತಮ ಡಿಪೆಂಡರ್‍ಗೆ ವೈಯಕ್ತಿಕ ಟ್ರೋಫಿ ನೀಡಲಾಗುವುದು ಎಂದರು.ಹಗ್ಗಜಗ್ಗಾಟ ಸ್ಪರ್ಧೆಯು ಮಕ್ತ ಪಂದ್ಯಾಟವಾಗಿದ್ದು, ಈಗಾಗಗಲೇ 30 ತಂಡಗಳು ಹೆಸರು ನೋಂದಾಯಿಸಿಕೊಂಡಿವೆ. ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಪ್ರಥಮ ರೂ. 5018, ದ್ವಿತೀಯ 4018, ತೃತೀಯ ಮತ್ತು ಚತುರ್ಥ ರೂ.2018 ಬಹುಮಾನದ ಜತೆಗೆ ಟ್ರೋಫಿ ನೀಡಲಾಗುವುದು ಎಂದು ಅವರು ತಿಳಿಸಿದರು. ನವಚೇತನ ಮಿತ್ರವೃಂದದ ಅಧ್ಯಕ್ಷ ಪ್ರಶಾಂತ್ ಕೆ ಮತ್ತು ದೀಪಾವಳಿ ಆಚರಣಾ ಸಮಿತಿಯ ಅಧ್ಯಕ್ಷ ಆನಂದ ರೈ ಸಾಂತ್ಯ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Related posts

Leave a Reply