Header Ads
Header Ads
Breaking News

ನ.11ರಂದು ಆಯುಷ್ ಫೌಂಡೇಷನ್ ಟ್ರಸ್ಟ್‌ನ ನೂತನ ಪದಾಧಿಕಾರಿಗಳ ಪದಗ್ರಹಣ

ಸಮಾನ ಮನಸ್ಕ ಆಯುಷ್ ವೈದ್ಯರ ಒಗ್ಗೂಡುವಿಕೆಯಿಂದ ಆರಂಭಗೊಂಡ ಆಯುಷ್ ಫೌಂಡೇಷನ್ ಟ್ರಸ್ಟ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ಸಮಾಜಸೇವಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ನ.11ರಂದು ನಡೆಯಲಿದೆ ಎಂದು ಆಯುಷ್ ಫೌಂಡೇಷನ್‌ನ ಸ್ಥಾಪಕಾಧ್ಯಕ್ಷೆ ಡಾ. ಆಶಾಜ್ಯೋತಿ ರೈ ಹೇಳಿದ್ದಾರೆ.

 ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2015ರಲ್ಲಿ ಆರಂಭಗೊಂಡ ಆಯುಷ್ ಫೌಂಡೇಷನ್ ಈಗಾಗಲೇ ಹಲವಾರು ಸಮಾಜಮುಖಿ ಕಾರ್ಯಕ್ರಮಮಗಳನ್ನು ಆಯೋಜಿಸಿಕೊಂಡು ಬಂದಿದೆ. ಆಯುಷ್ ವೈದ್ಯರಿಗೆ, ವಿದ್ಯಾರ್ಥಿಗಳಿಗೆ ತರಬೇತಿ ಶಿಬಿರಗಳನ್ನು ಹಮ್ಮಿಕೊಂಡು ಸಮಾಜದಲ್ಲಿ ಮಹಿಳಾ ಸಬಲೀಕರಣವನ್ನು ಅರ್ತಪೂರ್ಣವಾಗಿ ಬಿಂಬಿಸುವಲ್ಲಿ ಸಂಸ್ಥೆಯು ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ಸಮಾಜಸೇವಾ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮವು ನ.೧೧ರಂದು ಮಂಗಳೂರಿನ ಸಂತ ಅಲೋಷಿಯಸ್ ಹೈಸ್ಕೂಲ್ ಸಭಾಂಗಣದಲ್ಲಿ ನಡೆಯಲಿದೆ. ಕೇಂದ್ರ ಆಯುಷ್ ಖಾತೆ ಸಚಿವ ಶ್ರೀಪಾದ್ ಎಸ್ಸೋ ನಾಯಕ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ರಾಜ್ಯ ಸಚಿವ ಯು.ಟಿ. ಖಾದರ್, ನಾರಾಯಣ ಹೃದಯಾಲಯದ ಸಂಸ್ಥಾಪಕ ಡಾ. ದೇವಿಪ್ರಸಾದ್ ಶೆಟ್ಟಿ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ. ಸಂತೋಶ್ ಶೆಟ್ಟಿ ಕಾರ್ಯಕ್ರಮದ ಬಗ್ಗೆ ವಿವರಿಸಿದರು. 

ಸುದ್ದಿಗೋಷ್ಠಿಯಲ್ಲಿ ನಾಮನಿರ್ದೇಶಿತ ಅಧ್ಯಕ್ಷ, ಕರ್ನಾಟಕ ಆಯುರ್ವೇದ ಮೆಡಿಕಲ್ ಸೆಂಟರ್‌ನ ಡಾ. ಗೋಪಾಲಕೃಷ್ಣ ನಾಯಕ್, ನಾಮನಿರ್ದೇಶಿತ ಉಪಾಧ್ಯಕ್ಷ ಇಬ್ನಿಸಿನಾ ಯುನಾನಿ ಮತ್ತು ಹಿಜಮಾ ಸೆಂಟರ್‌ನ ಡಾ. ನೂರುಲ್ಲಾ, ನಾಮನಿರ್ದೇಶಿತ ಕೋಶಾಧಿಕಾರಿ, ಶ್ರೀ ಕೃಷ್ಣಾ ಆಯುರ್ವೇದ ಸೆಂಟರ್‌ನ ಡಾ. ಕೇಶವ ಪಿ.ಕೆ., ಐಎಚ್‌ಎಂಎ ಅಧ್ಯಕ್ಷ, ನಾಮ ನಿರ್ದೇಶಿತ ಸಂಘಟನಾ ಕಾರ್ಯದರ್ಶಿ ಡಾ. ಪ್ರವೀಣ್ ರೈ, ವೇದಂ ಆರೋಗ್ಯ ಆಯುರ್ವೇದ ಆಸ್ಪತ್ರೆ ಅಧ್ಯಕ್ಷ ಡಾ.ಸಚಿನ್ ನಡ್ಕ ಉಪಸ್ಥಿತರಿದ್ದರು.

Related posts

Leave a Reply