Header Ads
Header Ads
Header Ads
Breaking News

ನ. 13 ರಂದು ಸುಳ್ಯದಲ್ಲಿ ಬಿಎಸ್‌ಎನ್‌ಎಲ್ ಸಾರ್ವಜನಿಕ ಜನ ಸಂಪರ್ಕ ಸಭೆ

ಬಿಎಸ್‌ಎನ್‌ಎಲ್ ಸಂಸ್ಥೆ ವತಿಯಿಂದ ಸಂಸದರ ನೇತೃತ್ವ ಮತ್ತು ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಾರ್ವಜನಿಕ ಜನ ಸಂಪರ್ಕ ಸಭೆ ನ.13ರಂದು ಅಪರಾಹ್ನ 3ಗಂಟೆಗೆ ಸುಳ್ಯ ತಾ.ಪಂ. ಸಾಮರ್ಥ್ಯ ಸೌಧದಲ್ಲಿ ಆಯೋಜಿಸಲಾಗಿದೆ ಎಂದು ದ.ಕ.ಟೆಲಿಕಾಂನ ಜಿಲ್ಲಾ ಸಲಹಾ ಸಮಿತಿ ಸದಸ್ಯ ವೆಂಕಟ್ ದಂಬೆಕೋಡಿ ತಿಳಿಸಿದರು.
ಅವರು ಸುಳ್ಯದಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಸಂಸದ ನಳಿನ್‌ಕುಮಾರ್ ಅವರ ಉಪಸ್ಥಿತಿಯಲ್ಲಿ ಸಭೆ ಜರಗಲಿದ್ದು, ಇಲಾಖೆಯ ಹಿರಿಯ ಅಧಿಕಾರಿಯಾಗಿರುವ ಪಿಜಿಎಂ ರವಿಕುಮಾರ್ ಹಾಗೂ ಸಂಸ್ಥೆಯ ಆಡಳಿತ, ತಾಂತ್ರಿಕ, ನಿರ್ವಹಣೆ ಮತ್ತಿತರ ವಿಭಾಗಗಳ ಡಿಜಿಎಂ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ ಎಂದು ವಿವರಿಸಿದರು.
ಇಲಾಖೆಯ ಸುಳ್ಯ ಉಪವಿಭಾಗದ ಎಂಜಿನಿಯರ್ ಆರ್.ಕೆ. ಭಟ್ ಉಪಸ್ಥಿತರಿದ್ದರು.

Related posts

Leave a Reply