Header Ads
Header Ads
Breaking News

ನ.2ರಿಂದ ರಾಗ ಸುಧಾ ರಸ 2018 ರಾಷ್ಟ್ರೀಯ ಸಂಗೀತೋತ್ಸವ

ಮಣಿ ಕೃಷ್ಣಸ್ವಾಮಿ ಅಕಾಡೆಮಿಯು ಈ ಬಾರಿಯ ರಾಗ ಸುಧಾ ರಸ ಸಂಗೀತೋತ್ಸವವನ್ನು ನವೆಂಬರ್ 2ರಿಂದ 5ರ ತನಕ ನಡೆಸಲು ತೀರ್ಮಾನಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ನಾಗೇಶ್ ಎ ಬಪ್ಪನಾಡು ತಿಳಿಸಿದ್ದಾರೆ.ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರಿನ ಪುರಭವನದಲ್ಲಿ ಸಂಜೆ4.25ರಿಂದ ಪ್ರಮೋದ್ ಗೋಖಲೆ ಅವರ ಹಾಡುಗಾರಿಕೆ ನಡೆಯಲಿದ್ದು, ಧನಶ್ರೀ ಶಬರಾಯ ವಯಲಿನ್ ಹಾಗೂ ಸುನಿಲ್ ಸುಬ್ರಹ್ಮಣ್ಯ  ಮೃದಂಗದಲ್ಲಿ ಸಹಕರಿಸಲಿರುವರು ಸಂಜೆ 5.30ಕ್ಕೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಶವು ಮಹಾಗಣಪತಿ ದೇವಸ್ಥಾನದ ಆಡಳಿತ ಟ್ರಸ್ಟಿ ಶರವು ರಾಘವೇಂದ್ರ ಶಾಸ್ತ್ರಿಗಳು ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ ಎಂದರು.

ಆನಂತರ ನಿತ್ಯಾನಂದ ರಾವ್ ಅವರು ಮಾತನಾಡಿ, ನವೆಂಬರ್ 3ರಂದು ಕಾರ್ಯಕ್ರಮ ಮಂಗಳೂರು ಪುರಭವನದಲ್ಲಿ ನಡೆಯಲಿದೆ. ಯುವ ಕಲಾಮಣಿ-2018ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ನವೆಂಬರ್ 4ರಂದು ಸುರತ್ಕಲ್ ಗೋವಿಂದದಾಸ್ ಕಾಲೇಜಿನಲ್ಲಿ ಮತ್ತು ನವೆಂಬರ್ ೫ರಂದು ಮಂಗಳೂರಿನ ಪುರಭವನದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಅಕಾಡೆಮಿಯ ಗೌರವ ಕಾರ್ಯದರ್ಶಿ ಹರಿಕೃಷ್ಣ ಪುನರೂರು, ಅಧ್ಯಕ್ಷ ಕ್ಯಾಪ್ಟನ್ ಗಣೇಶ್ ಕಾರ್ಣೀಕ್, ಬಾಲಕೃಷ್ಣ ಉಪಸ್ಥಿತರಿದ್ದರು.

Related posts

Leave a Reply