Header Ads
Header Ads
Header Ads
Breaking News

ನ.20ರಿಂದ 24ರ ವರೆಗೆ ಪ್ರೋ ಇಂಡಿಯಾ ಮಾಯಿಥಾಯ್ ಚಾಂಪಿಯನ್‍ಶಿಪ್

ಕರ್ನಾಟಕದ ಮಾಯಿಥಾಯ್ ಎಸೋಸಿಯೇಶನ್ ವತಿಯಿಂದ ರಾಷ್ಟ್ರೀಯ ಮಟ್ಟದ ಮಾಯಿಥಾಯ್ ಚಾಂಪಿಯನ್‍ಶಿಪ್ ನವೆಂಬರ್ 20ರಿಂದ 24ರ ವರೆಗೆ ಮಂಗಳೂರಿನ ಕರಾವಳಿ ಮೈದಾನದಲ್ಲಿ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಯಿಥಾಯ್ ಎಸೋಸಿಯೇಶನ್‍ನ ರಾಜ್ಯಾಧ್ಯಕ್ಷರಾದ ರಾಜಗೊಪಾಲ್ ರೈ ತಿಳಿಸಿದರು.

ಮಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇತಿಹಾಸದಲ್ಲೇ ಪ್ರಥಮ ಬಾರಿಗೆ ನಡೆಯುವ ಈ ಪಂದ್ಯಾಟದಲ್ಲಿ ದೇಶದ 27 ರಾಜ್ಯಗಳಿಂದ ಕ್ರೀಡಾಳುಗಳು ಭಾಗವಹಿಸಲಿದ್ದಾರೆ. ಇದು ದೇಶದಲ್ಲೇ ಅತ್ಯಂತ ದೊಡ್ಡ ಪಂದ್ಯಾಟವಾಗಲಿದ್ದು, ಮಂಗಳೂರಿನ ಜನತೆಗೆ ಹೆಮ್ಮೆಯ ವಿಚಾರವಾಗಿದೆ.ಪಂದ್ಯಾಟವು ನವೆಂಬರ್ 20ರಂದು ಮಧ್ಯಾಹ್ನ 3.30ಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಮಂಗಳೂರು ಸಂಸದರಾದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಲಿದ್ದಾರೆ. ನವೆಂಬರ್ 20ರಿಂದ 23ರ ವರೆಗೆ ಮೊಯಿಥಾಯಿ ಪ್ರೋ ಇಂಡಿಯಾ ಚಾಂಪಿಯನ್‍ಶಿಪ್ ನಡೆಯಲಿದ್ದು 24ರಂದು ರಾಷ್ಟ್ರಮಟ್ಟದ ಅತ್ಯುತ್ತಮ ಪ್ರೊಪೇಶನಲ್ ಪೈಟರ್ಸ್‍ಗಳಿಂದ ನಡೆಯಲಿದ್ದು ಈ ಪಂದ್ಯಾಟವನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಚಂದ್ರಹಾಸ ಶೆಟ್ಟಿ, ಇಲಿಯಾಸ್ ಸಾಂಟೀಸ್, ಮಹೇಶ್ ಪಾಂಡೆ, ಸದಾನಂದ ನಾವರ, ಸ್ವರ್ಣ ಕುಂದರ್, ಬಷೀರ್ ಬೈಕಂಪಾಡಿ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *