Header Ads
Breaking News

ನ.21ರಂದು ಶ್ರೀನಿವಾಸ್ ವಿವಿಯಲ್ಲಿ ರಾಷ್ಟ್ರ ಮಟ್ಟದ ಸಂಶೋಧನಾ ಲೇಖನ ಸ್ಪರ್ಧೆ

ಮಂಗಳೂರು : ಐಇಇಇ ಶ್ರೀನಿವಾಸ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಶಾಖೆಯ ವತಿಯಿಂದ ಐಇಇಇ ಮಂಗಳೂರು ಉಪವಿಭಾಗದ ಸಹಯೋಗದೊಂದಿಗೆ ರಾಷ್ಟ್ರ ಮಟ್ಟದ ಸಂಶೋಧನಾ ಲೇಖನ ಸ್ಪರ್ಧೆಯನ್ನು ಆಯೋಜಿಸಿದ್ದು, ನ.21ರಂದು ಅಂತರ್ಜಾಲದ ಮುಖಾಂತರ ಲೇಖನಾ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

ಈಗಾಗಲೇ ರಾಷ್ಟ್ರ ಮಟ್ಟದ ಸಂಶೋಧನಾ ಲೇಖನ ಸ್ಪರ್ಧೆಗೆ ಸುಮಾರು 50 ಸಂಶೋಧನಾ ಲೇಖನಗಳನ್ನು ವಿವಿಧ ವಿಶ್ವವಿದ್ಯಾನಿಲಯಗಳ ಸಂಶೋಧನಾ ವಿದ್ಯಾರ್ಥಿಗಳು ಕಳುಹಿಸಿದ್ದು, ಪ್ರತೀ ವಿಭಾಗದಲ್ಲೂ ಆಯ್ದ 10 ಸಂಶೋಧನಾ ಲೇಖನಗಳನ್ನು ನವೆಂಬರ್ 21ರಂದು ನಡೆಯಲಿರುವ ಸಂಶೋಧನಾ ಲೇಖನ ಸ್ಪರ್ಧೆಯಲ್ಲಿ ಮಂಡಿಸಲಾಗುತ್ತದೆ. ಪ್ರತಿ ವಿಭಾಗದ ಅತ್ಯುತ್ತಮ ಲೇಖನವೊಂದಕ್ಕೆ ರೂ.5000 ನಗದು ಬಹುಮಾನ ನೀಡಲಾಗುತ್ತದೆ.
ಇನ್ನು ಈ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ, ಐಇಇಇ ವಿದ್ಯಾರ್ಥಿ ಶಾಖೆ ಎಸ್.ಎಂ.ವಿ.ಐ.ಟಿ.ಎಂ. ಬಂಟಕಲ್ಲು, ಖಜಾಂಚಿ, ಐಇಇಇ ಮಂಗಳೂರು ಉಪವಿಭಾಗ ಡಾ. ನಿರಂಜನ್ ಚಿಪ್ಳೂಣ್ಕರ್, ಸಮಾಲೋಚಕರಾದ ಡಾ.ವಾಸುದೇವ ಅವರು ಮುಖ್ಯ ಅತಿಥಿಗಳಾಗಿ ಭಗವಹಿಸಲಿರುವರು. ಶ್ರೀನಿವಾಸ ವಿಶ್ವವಿದ್ಯಾನಿಲಯದ ಉಪಕುಲಪತಿಗಳು ಹಾಗೂ ಐಇಇಇ ಶ್ರೀನಿವಾಸ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಶಾಖೆಯ ಮುಖ್ಯಸ್ಥರಾದ ಡಾ. ಪಿ.ಎಸ್. ಐತಾಳ್ ಇವರು ಅಧ್ಯಕ್ಷತೆಯನ್ನು ವಹಿಸಲಿರುವರು.
ಸಮಾರೋಪ ಸಮಾರಂಭದಲ್ಲಿ ಡಾ. ಕರುಣಾಕರ್ ಎ. ಕೊಟೆಗಾರ್, ಹಿರಿಯ ಸದಸ್ಯರು, ಐಇಇಇ, ಮುಖ್ಯಸ್ಥರು, ಗಣಕ ಅನ್ವಯಿಕಶಾಸ್ತ್ರ ವಿಭಾಗ, ಎಂ.ಐ.ಢಿ ಮಣಿಪಾಲ ಇವರು ಮುಖ್ಯ ಅತಿಥಿಗಳಾಗಿಯೂ, ಪ್ರೊಫೆಸರ್ ಶ್ರೀಧರ ಆಚಾರ್ಯ, ಡೀನ್, ಕಾಲೇಜ್ ಆಫ್ ಕಂಪ್ಯೂಟರ್ ಸಯನ್ಸ್ ಅಂಡ್ ಇನ್ಫೋರ್‌ಮೇಶನ್ ಸಯನ್ಸ್, ಶ್ರೀನಿವಾಸ ವಿಶ್ವವಿದ್ಯಾನಿಲಯ ಮಂಗಳೂರು ಇವರು ಗೌರವಾನ್ವಿತ ಅತಿಥಿಗಳಾಗಿಯೂ ಡಾ. ಪಿ. ಎಸ್. ಐತಾಳ್, ಉಪಕುಲಪತಿಗಳು, ಶ್ರೀನಿವಾಸ ವಿಶ್ವವಿದ್ಯಾನಿಲಯ ಮಂಗಳೂರು ಇವರು ಅಧ್ಯಕ್ಷರಾಗಿಯೂ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಸಂಯೋಜಕರಾಗಿ ಐಇಇಇ ಮಂಗಳೂರು ಉಪವಿಭಾಗದ ಅಧ್ಯಕ್ಷರಾದ ಡಾ. ನಿರಂಜನ್ ಯು. ಸಿ. ಹಾಗೂ ಐಇಇಇ ಶ್ರೀನಿವಾಸ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಶಾಖೆಯ ಸಮಾಲೋಚಕರಾದ ಡಾ. ಕೃಷ್ಣ ಪ್ರಸಾದ್ ಕೆ ಇವರು ಕಾರ್ಯನಿರ್ವಹಿಸುತ್ತಿದ್ದಾರೆ. ಐಇಇಇ ಶ್ರೀನಿವಾಸ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಶಾಖೆಯ ಸಲಹೆಗಾರರರಾದ ಡಾ. ಎ. ಜಯಂತಿಲಾ ದೇವಿ ಉಪಸ್ಥಿತರಿರುವರು.

Related posts

Leave a Reply

Your email address will not be published. Required fields are marked *