Header Ads
Header Ads
Breaking News

ನ. 25ರಂದು ತೆಂಕಿಲ ಸ್ವಾಮಿ ಕಲಾ ಮಂದಿರದಲ್ಲಿ ಕುಕ್ಕಾಡಿ ಮುಕುಂದ ನಾರಾಯಣ ನಾಯಕ್ ಜನ್ಮಶತಮಾನೋತ್ಸವ

ಪುತ್ತೂರು: ಭಾಲಾವಲೀಕಾರ್ ರಾಜಾಪುರ ಸಾರಸ್ವತ ಸಂಘ-ಸಂಸ್ಥೆಗಳ ಕೇಂದ್ರೀಯ ಸಮಿತಿ ವತಿಯಿಂದ ನ. ೨೫ರಂದು ತೆಂಕಿಲ ಸ್ವಾಮಿ ಕಲಾ ಮಂದಿರದಲ್ಲಿ ಕುಕ್ಕಾಡಿ ಮುಕುಂದ ನಾರಾಯಣ ನಾಯಕ್ ಜನ್ಮಶತಮಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜನ್ಮಶತಮಾನೋತ್ಸವ ಕಾರ್ಯಕ್ರಮದ ಸಂಯೋಜಕ ದಯಾನಂದ ನಾಯಕ್ ಕುಂಟಿಕಾನ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನ್ಮಶತಮಾನೋತ್ಸವದ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಬ್ಯಾಂಕ್‌ನ ನಿವೃತ್ತ ಜನರಲ್ ಮ್ಯಾನೇಜರ್ ಉಪೇಂದ್ರ ಪ್ರಭು ನೆರವೇರಿಸಲಿದ್ದಾರೆ. ಮಣಿಪಾಲ ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘದ ಅಧ್ಯಕ್ಷ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಜಂಟಿ ಆಯುಕ್ತ ಎಂ. ಗೋಕುಲ್‌ದಾಸ್ ನಾಯಕ್ ಅಧ್ಯಕ್ಷತೆ ವಹಿಸಲಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕ ಸೀತಾರಾಮ ಕೆದಿಲಾಯ ಅವರು ಮುಕುಂದ ನಾಯಕ್ ನೆನಪುಗಳನ್ನು ಮಾಡಲಿದ್ದಾರೆ. ಮುಂಬೈ ರಾ. ಸಾ. ಸಂಘದ ಉಪಾಧ್ಯಕ್ಷ ಎಂ. ರಮೇಶ್ ಜಿ. ನಾಯಕ್ ಸ್ಮರಣ ಸಂಚಿಕೆ ಬಿಡುಗಡೆ, ಶ್ರೀ ಸರಸ್ವತಿ ಎಜ್ಯುಕೇಶನಲ್ ಸೊಸೈಟಿ ಅಧ್ಯಕ್ಷ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಅಣ್ಣಾ ವಿನಯಚಂದ್ರ ಸ್ಮರಣಾರ್ಥ ವೇದಭಂಡಾರ ಸಮರ್ಪಣೆ, ಮಸ್ಕತ್ ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘದ ಅಧ್ಯಕ್ಷ ಎಂ. ನರಸಿಂಹ ನಾಯಕ್ ಸಾರಸ್ವತ ಭಕ್ತಿಗಾನ ಧ್ವನಿಸುರುಳಿಯ ಬಿಡುಗಡೆ ಹಾಗೂ ಬೆಂಗಳೂರಿನ ಮಾಚೋಹಳ್ಳಿ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ನಾಗೇಶಮದ್ರ ಕಾಮತ್ ಕೊಂಕಣಿಯಲ್ಲಿ ರಚಿತವಾದ ರಾಮಾಯಣ ಕೃತಿ ಬಿಡುಗಡೆ ಮಾಡಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಭಾ.ರಾ.ಸಾ ಸಂಘ-ಸಂಸ್ಥೆಗಳ ಕೇಂದ್ರೀಯ ಸಮಿತಿ ಅಧ್ಯಕ್ಷ ಸುನಿಲ್ ಬೋರ್ಕರ್, ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಪುಂಡಿಕಾ, ಪುತ್ತೂರು ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘದ ಜೊತೆ ಕಾರ್ಯದರ್ಶಿ ನಾರಾಯಣ ನಾಯಕ್, ನಿರ್ದೇಶಕ ಹರೀಶ್ ಬೋರ್ಕರ್ ಕತ್ತಲಕಾನ ಉಪಸ್ಥಿತರಿದ್ದರು.

Related posts

Leave a Reply