Header Ads
Header Ads
Breaking News

ನ.26ರಂದು ಉಡುಪಿಗೆ ಆಗಮಿಸಲಿರುವ ಕನಕ ಸದ್ಭಾವನ ಜ್ಯೋತಿ ರಥಯಾತ್ರೆ

ಕನಕ ಸದ್ಭಾವನ ಜ್ಯೋತಿ ರಥಯಾತ್ರೆ ಉಡುಪಿಗೆ ಇದೇ ನವಂಬರ್ 26ರಂದು ಬೆಳಿಗ್ಗೆ 9:30 ಕ್ಕೆ ಆಗಮಿಸಲಿದೆ ಎಂದು ರಥಯಾತ್ರೆ ಸಮಿತಿಯ ರಾಜ್ಯಾಧ್ಯಕ್ಷ ಓಂ ಶ್ರೀ ಕೃಷ್ಣಮೂರ್ತಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ರಥ ಯಾತ್ರೆಯು ಉಡುಪಿಯ ಜೋಡುಕಟ್ಟೆಯಿಂದ ಶ್ರೀ ಕೃಷ್ಣ ಮಠದ ರಥಬೀದಿಗೆ ಮೆರವಣಿಗೆಯ ಮೂಲಕ ಬಂದು ಕೃಷ್ಣ ಮಠದ ಮುಂಭಾಗದಲ್ಲಿ ಇರುವ ಕನಕ ಮಂದಿರದ ಎದುರು ಸಮಾಪನಗೊಳ್ಳಲಿದೆ. ಈ ಸಂದರ್ಭದಲ್ಲಿ ವಿಶೇಷ ಪೂಜೆಯನ್ನು ನಡೆಸಲಾಗುವುದು ಎಂದು ತಿಳಿಸಿದರು.ಮೇಟಿ ಮುದಿಯಪ್ಪ ನಿವೃತ್ತ ಅಧ್ಯಾಪಕ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Related posts

Leave a Reply