Header Ads
Header Ads
Breaking News

ನ.26ರಂದು ಸಂವಿಧಾನ ದಿನಾಚರಣೆಯಂದು ಭಾವಚಿತ್ರ ಅನಾವರಣ

ಭಾರತದ ಸಂವಿಧಾನ ರಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಬೆನೆಗಲ್ ನರಸಿಂಗರಾವ್‌ರನ್ನು ನೆನಪಿಸುವ ಸಲುವಾಗಿ ನ. 26ರಂದು ಸಂವಿಧಾನ ದಿನಾಚರಣೆಯಂದು ಅವರ ಭಾವಚಿತ್ರ ಅನಾವರಣಗೊಳಿಸುವ ಕಾರ್ಯಕ್ರಮವನ್ನು ಕಾಲೇಜಿನ ಸಭಾಂಗಣದಲ್ಲಿ ಬೆಳಗ್ಗೆ 10ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಪುತ್ತೂರು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಲೀಗಲ್ ಸ್ಟಡೀಸ್‌ನ ನಿರ್ದೇಶಕ ಡಾ. ಬಿ.ಕೆ. ರವೀಂದ್ರ ಹೇಳಿದರು.

ಅವರು ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆನೆಗಲ್ ನರಸಿಂಗರಾವ್ ಅವರು ಸವಿಧಾನ ರಚನಾ ಸಮಿತಿ ಸದಸ್ಯರಾಗಿ ಅತ್ಯಂತ ಉತ್ತಮ ಕೆಲಸ ಮಾಡಿದರು. ಸಂವಿಧಾನದ ಸಂಪೂರ್ಣ ಅಧ್ಯಾಯವನ್ನು ಡ್ರಾಪ್ಟ್ ಮಾಡುವಲ್ಲಿ ಅವರ ಪಾತ್ರ ಬಹಳಷ್ಟಿದೆ. ಈ ನಿಟ್ಟಿನಲ್ಲಿ ಅವರನ್ನು ನೆನಪಿಸುವ ಕಾರಣದಿಂದ ನ. 26ರಂದು 1ದಿವಸ ಚರ್ಚಾಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭ ಕಾಲೇಜಿನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಅಣುಕು ನ್ಯಾಯಾಲಯದ ಸಭಾಂಗಣದ ಲೋಕಾರ್ಪಣೆ ಕಾರ್ಯಕ್ರಮವು ನಡೆಯಲಿದೆ ಎಂದರು.

ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಬಿ. ಗಣೇಶ್ ಜೋಷಿ ಮತ್ತು ಪ್ರಾಂಶುಪಾಲ ರಾಜೇಂದ್ರ ಪ್ರಸಾದ್ ಎ ಉಪಸ್ಥಿತರಿದ್ದರು.

ವಹಿಸಿದ ಬೆನೆಗಲ್ ನರಸಿಂಗರಾವ್‌ರನ್ನು ನೆನಪಿಸುವ ಸಲುವಾಗಿ ನ. 26ರಂದು ಸಂವಿಧಾನ ದಿನಾಚರಣೆಯಂದು ಅವರ ಭಾವಚಿತ್ರ ಅನಾವರಣಗೊಳಿಸುವ ಕಾರ್ಯಕ್ರಮವನ್ನು ಕಾಲೇಜಿನ ಸಭಾಂಗಣದಲ್ಲಿ ಬೆಳಗ್ಗೆ 10ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಪುತ್ತೂರು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಲೀಗಲ್ ಸ್ಟಡೀಸ್‌ನ ನಿರ್ದೇಶಕ ಡಾ. ಬಿ.ಕೆ. ರವೀಂದ್ರ ಹೇಳಿದರು.

ಅವರು ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆನೆಗಲ್ ನರಸಿಂಗರಾವ್ ಅವರು ಸವಿಧಾನ ರಚನಾ ಸಮಿತಿ ಸದಸ್ಯರಾಗಿ ಅತ್ಯಂತ ಉತ್ತಮ ಕೆಲಸ ಮಾಡಿದರು. ಸಂವಿಧಾನದ ಸಂಪೂರ್ಣ ಅಧ್ಯಾಯವನ್ನು ಡ್ರಾಪ್ಟ್ ಮಾಡುವಲ್ಲಿ ಅವರ ಪಾತ್ರ ಬಹಳಷ್ಟಿದೆ. ಈ ನಿಟ್ಟಿನಲ್ಲಿ ಅವರನ್ನು ನೆನಪಿಸುವ ಕಾರಣದಿಂದ ನ. 26ರಂದು 1 ದಿವಸ ಚರ್ಚಾಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭ ಕಾಲೇಜಿನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಅಣುಕು ನ್ಯಾಯಾಲಯದ ಸಭಾಂಗಣದ ಲೋಕಾರ್ಪಣೆ ಕಾರ್ಯಕ್ರಮವು ನಡೆಯಲಿದೆ ಎಂದರು.

ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಬಿ. ಗಣೇಶ್ ಜೋಷಿ ಮತ್ತು ಪ್ರಾಂಶುಪಾಲ ರಾಜೇಂದ್ರ ಪ್ರಸಾದ್ ಎ ಉಪಸ್ಥಿತರಿದ್ದರು.

Related posts

Leave a Reply