Header Ads
Header Ads
Breaking News

ನ.6ರಂದು `ಸಂಪೂರ್ಣ ದಿವ್ಯ ದರ್ಶನಂ’ ವಿಡಿಯೋ? ಆಡಿಯೋ ಸಿಡಿ ಬಿಡುಗಡೆ

ಮುಂಬೈ ಕಲಾ ಸೌರಭ ಸಂಸ್ಥೆಯ ರಜತ ವರ್ಷಾಚರಣೆಯ ಅಂಗವಾಗಿ `ಸಂಪೂರ್ಣ ದಿವ್ಯ ದರ್ಶನಂ’ ವಿಡಿಯೋ? ಆಡಿಯೋ ಸಿಡಿಯನ್ನು ನವೆಂಬರ್ 6 ರಂದು ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಬಿಡುಗೊಳ್ಳಿಸಲಾಗುತ್ತದೆ ಎಂದು ಕಾರ್ಯಕ್ರಮದ ಸಂಯೋಜಕ ಪರಮಾನಂದ ಸಾಲಿಯಾನ್, ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ್ ಸ್ವಾಮೀಜಿ ಅವರು ಕಾರ್ಯಕ್ರಮ ಉದ್ಘಾಟಿಸಿ ಆರ್ಶಿವಚನ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಸಂಸ್ಥೆ ಮುಂಬೈ ಹಾಗೂ ಮಹಾರಾಷ್ಟ್ರದಲ್ಲಿ ಸಂಗೀತ, ನಾಟಕ, ನೃತ್ಯ, ಯಕ್ಷಗಾನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾ ಕಾರ್ಯಕ್ರಮಗಳನ್ನು ಸಂಯೋಜನೆ, ಪ್ರದರ್ಶನ ತರಬೇತಿಯನ್ನು ಕಳೆದ 25ವರ್ಷದಿಂದ ನಿರಂತವಾಗಿ ನೀಡುತ್ತಾ ಬಂದಿದ್ದೆ. ಇದೀಗಾ ಬೆಳ್ಳಿ ಹಬ್ಬದ ಅಂಗವಾಗಿ ವಿವಿಧ ಪುಣ್ಯ ಕ್ಷೇಗಳಿಗೆ ಭೇಟಿ ನೀಡಿ, ಅಲ್ಲಿನ ಪ್ರಮುಖರೊಂದಿಗೆ ಚರಿತ್ರೆಯ ಸಂವಾದ, ಚಿತ್ರರಂಗದ ಪ್ರಮುಖ ಗಾಯಕರಾದ ಎಸ್.ಬಿ ಬಾಲ ಸುಬ್ರಹ್ಮಣ್ಯ ಸೇರಿದಂತೆ ವಿವಿಧ ಗಾಯಕರು ಹಾಡಿರುವ ಭಕ್ತಿ ಗೀತೆ ಸಂಯೋಜಿಸಿ ಸಂಪೂರ್ಣ ದಿವ್ಯ ದರ್ಶನ ವಿಡಿಯೋ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.ಸೃಷ್ಠಿ ನೃತ್ಯ ಕಲಾ ಕುಟೀರದ ಮುಖ್ಯಸ್ಥೆ ಡಾ.ಮಂಜರಿ, ಸತೀಶ್ ಸುರತ್ಕಲ್, ದಯಾನಂದ, ಗಾಯಕಿ ಕಲಾವತಿ ಉಪಸ್ಥಿತರಿದ್ದರು.

Related posts

Leave a Reply