Header Ads
Header Ads
Breaking News

ಪಂಚತಂತ್ರ ಸಿನಿಮಾದ ಪ್ರಚಾರಕ್ಕಾಗಿ ಆಗಮಿಸಿದ ಯೋಗರಾಜ್ ಭಟ್

ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ನಿರ್ದೇಶನದ ಬಹು ನಿರೀಕ್ಷೆಯ ಪಂಚತಂತ್ರ ಸಿನಿಮಾದ ಪ್ರಚಾರಕ್ಕಾಗಿ ಚಿತ್ರತಂಡ ಮಂಗಳೂರಿಗೆ ಆಗಮಿಸಿತು. ಮಂಗಳೂರಿನ ಬಿಗ್ ಸಿನಿಮಾಸ್‌ನಲ್ಲಿ ನಿರ್ದೇಶಕ ಯೋಗರಾಜ್ ಭಟ್ ಮಾತನಾಡಿ, ಪಂಚತಂತ್ರ ಸಿನಿಮಾದಲ್ಲಿ ಆಮೆ ಮತ್ತು ಮೊಲದ ಕತೆಯನ್ನು, ಮೊಲವನ್ನು ಯುವಕರಿಗೆ ಹಾಗೂ ಆಮೆಯನ್ನು ಹಿರಿಯರಿಗೆ ಆಳವಡಿಸಿ, ಕಾರ್ ರೇಸ್ ಮೂಲಕ ಯುವಕರು ಗೆದ್ರ ಅಥವಾ ವಯಸ್ಸಾದವರು ಗೆದ್ರಾ ಅಂತ ಹೇಳುವ ಪ್ರಯತ್ನ ಮಾಡಲಾಗಿದೆ. ಭಾರತೀಯ ಚಿತ್ರರಂಗದಲ್ಲಿ ಯಾರೂ ಈ ರೀತಿಯ ಸಿನಿಮಾ ಇದುವರೆಗೆ ಮಾಡಿಲ್ಲ ಇದು ಮೊದಲ ಪ್ರಯತ್ನ ಅಂತ ಹೇಳಿದ್ರು.. ಇನ್ನೂ ಚಿತ್ರದ ನಾಯಕಿ ಸೋನಲ್ ಮೊಂತೊರೋ ಚಿತ್ರದಲ್ಲಿ ಬಜಾರಿ ಹುಡುಗಿ ಪಾತ್ರದಲ್ಲಿ ಬಾಲಿವುಡ್‌ನ ಜೆನಿಲಿಯಾ ಡಿ’ಸೋಜಾ ರೀತಿಯ ಕ್ಯಾರೆಕ್ಟರ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

Related posts

Leave a Reply

Your email address will not be published. Required fields are marked *