Header Ads
Header Ads
Breaking News

ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಹಿನ್ನಲೆ : ಕಾರ್ಕಳ ಬಸ್ಸು ನಿಲ್ದಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ವಿಜಯೋತ್ಸವ

ಕಾರ್ಕಳ: ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದ ಹಿನ್ನೆಲೆಯಲ್ಲಿ ಕಾರ್ಕಳ ಬಸ್ ನಿಲ್ದಾಣ ಪರಿಸರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ ವಿಜಯೋತ್ಸವದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಪಟ್ಟರು. ಈ ಸಂದರ್ಭ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಎ.ಭಾವ ಮಾತನಾಡಿ, ಭಾರತ ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಮುಕ್ತಗೊಳಿಸುತ್ತೇನೆಂದು ಹೇಳುವ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯು ಅವರು ಕಂಡಿರುವ ಹಗಲು ಕನಸ್ಸಿನದಾಗಿದೆ. ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಹಾಗೂ ಗೌರವ ಇಲ್ಲದಿರುವುದೇ ಅವರ ಇಂತಹ ಬೇಜಾಬ್ದಾರಿ ಹೇಳಿಕೆ ನೀಡಲು ಕಾರಣ. ಇದಕ್ಕೆ ಮತದಾರ ಭಾಂದವರು ತಕ್ಕ ಉತ್ತರ ನೀಡಿದ್ದಾರೆ ಎಂದು ಹೇಳಿದರು.

ಮಾಜಿ ಶಾಸಕ ಹೆಚ್.ಗೋಪಾಲಭಂಡಾರಿ,ಉತ್ತರ ವಲಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಮುಖಂಡರಾದ ಸುಭೀತ್ ಎನ್.ಆರ್, ಶುಭದರಾವ್, ಅಶ್ಪಕ್ ಅಹಮ್ಮದ್, ವಿವೇಕಾನಂದ ಶೆಣೈ, ಪ್ರತಿಮಾ ರಾಣೆ, ನವೀನ್ ದೇವಾಡಿಗ, ಆರೀಫ್ ಕಲ್ಲೊಟ್ಟೆ, ಸುನೀಲ್ ಕೋಟ್ಯಾನ್,ಸುನೀಲ್ ಸೋನ್ಸ್, ತನ್ವೀರ್ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply