Header Ads
Header Ads
Header Ads
Breaking News

ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಪಂಚಶ್ರೀ ಗ್ರೂಫ್ ವತಿಯಿಂದ ರಸಮಂಜರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದ ಸ್ಟಾರ್ ನೈಟ್

ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವದ ಪ್ರಯುಕ್ತ ಪಂಚಶ್ರೀ ಗ್ರೂಫ್ ವತಿಯಿಂದ ಯಶಸ್ವಿ ೮ನೇ ವರ್ಷದ ರಸಮಂಜರಿ, ನೃತ್ಯ ವೈಭವ, ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂಳಗೊಂಡ ಸ್ಟಾರ್ ನೈಟ್-2018 ಅದ್ದೂರಿಯಾಗಿ ನಡೆಯಿತು.

ಸಭಾ ಕಾರ್ಯಕ್ರಮದಲ್ಲಿ ದೈವ ನರ್ತಕ ಶೇಖರ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಮಾತನಾಡಿದ ವಿಟ್ಲ ಅರಮನೆಯ ಕೃಷ್ಣಯ್ಯ ಕೆ ಅವರು ಪಂಚಶ್ರೀ ಗ್ರೂಫ್ ಕಳೆದ ಎಂಟು ವರ್ಷದಿಂದ ವಿಭಿನ್ನ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಅದಲ್ಲದೇ ಶೇಖರ ಅವರನ್ನು ಗುರುತಿಸಿ ಸನ್ಮಾನಿಸಿರುವುದು ಶ್ಲಾಘನೀಯವಾಗಿದೆ ಎಂದು ತಿಳಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಂಗಳೂರಿನ ಹೆಸರಾಂತ ಆರ್‍ಯಾನ್ಸ್ ನೃತ್ಯ ತಂಡದಿಂದ ನೃತ್ಯ ವೈಭವ ನಡೆಯಿತು. ಚಿತ್ರನಟರಾದ ಅನೂಪ್ ಸಾಗರ್, ಆರಾಧ್ಯ ಶೆಟ್ಟಿ, ತೌಳವ ಸೂಪರ್ ಸ್ಟಾರ್ ಸೌರಭ್ ಭಂಡಾರಿ, ಉಮಿಳ್ ಚಿತ್ರದ ಪೂಜಾ ಶೆಟ್ಟಿ, ಉಮೇಶ್ ಮಿಜಾರ್ ಮೊದಲಾದವರು ಆಗಮಿಸಿ ಪ್ರೇಕ್ಷಕರಿಗೆ ಮನರಂಜನೆ ನೀಡಿದರು. ಬಲೆ ತೆಲಿಪಾಲೆ ತಂಡದ ಮಸ್ಕಿರಿ ಕುಡ್ಲದ ದೀಪಕ್ ರೈ ಸಾರಥ್ಯದಲ್ಲಿ ಹಾಸ್ಯ ಕಾರ್ಯಕ್ರಮ ನಡೆಯಿತು. ಕಿಲಾಡಿಗಳು ಖ್ಯಾತಿಯ ಹಿತೇಶ್ ಕಾಪಿನಡ್ಕ ಹಾಗೂ ಅನೀಶ್ ಅವರು ಪ್ರೇಕ್ಷಕರನ್ನು ವಿವಿಧ ನಟನೆಗಳ ಮೂಲಕ ನಗಿಸಿದರು.

ಸತೀಶ್ ಬನ್ನಂಜೆ ಅವರ ನೇತೃತ್ವದಲ್ಲಿ ಸಂಗೀತ ರಸಮಂಜರಿ ನಡೆಯಿತು. ರವೀಂದ್ರ ಪ್ರಭು, ಜ್ಯೋತ್ಸ್ನ, ವಿದ್ಯಾ, ಕೇರಳ ರಾಜ್ಯದ ಫರೀದ್, ದಿವ್ಯ, ಸಂದೇಶ್ ವಿವಿಧ ಹಾಡುಗಳನ್ನು ಹಾಡುವ ಮೂಲಕ ಸಂಗೀತದ ರಸದೌತಣ ನೀಡಿದರು. ಖಾಸಗಿ ವಾಹಿನಿಯ ಶರ್ಮಿಳಾ ಹಾಗೂ ನಿರೂಪಕ ಮಧುರಾಜ್ ಅವರು ಇಡೀ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡಿ ಪ್ರೇಕ್ಷಕರ ಗಮನ ಸೆಳೆದರು.

ಈ ಸಂದರ್ಭ ಸಾಮಾಜಿಕ ಕಾರ್ಯಕರ್ತ ಅಶೋಕ್ ಕುಮಾರ್ ರೈ ಕೊಡಿಂಬಾಡಿ, ಜಿಲ್ಲಾ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಬ್ರೀಜೆಶ್ ಚೌಟ, ಬಿಜೆಪಿ ಮುಖಂಡ ಕಿಶೋರ್ ಕುಮಾರ್ ಪುತ್ತೂರು, ನ್ಯಾಯವಾದಿ ಜಯರಾಮ ರೈ, ರಾಧಾಕೃಷ್ಣ ಚೆಲ್ಲಡ್ಕ, ಸಾಮಾಜಿಕ ಕಾರ್ಯಕರ್ತ ರವಿಚಂದ್ರ, ಭಾರತ ಶಾಮಿಯಾನದ ಸಂಜೀವ ಪೂಜಾರಿ, ಆರ್.ಕೆ ಆರ್ಟ್ಸ್‌ನ ರಾಜೇಶ್ ವಿಟ್ಲ, ವಿಟ್ಲ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ವಿಶ್ವನಾಥ ಎಚ್, ವಿಟ್ಲ ಪಟ್ಟಣ ಪಂಚಾಯಿತಿ ಸದಸ್ಯ ಶ್ರೀ ಕೃಷ್ಣ ವಿಟ್ಲ ಮೊದಲಾದವರು ಭಾಗವಹಿಸಿದ್ದರು.

Related posts

Leave a Reply