Header Ads
Header Ads
Breaking News

ಪಂಚಾಯತ್‌ರಾಜ್ ಕಾಯ್ದೆ ಉಲ್ಲಂಘನೆ ಆರೋಪ ಗೌಜು, ಗದ್ದಲಗಳಿಗೆ ಬಲಿಯಾದ ಹಟ್ಟಿಯಂಗಡಿ ಗ್ರಾಮಸಭೆ

ಕುಂದಾಪುರ: ವಾರ್ಡ್ ಸಭೆ ನಡೆಸದೆ ಗ್ರಾಮಸಭೆ ನಡೆಸಿರುವುದು ಪಂಚಾಯತ್‌ರಾಜ್ ಕಾಯ್ದೆ ಉಲ್ಲಂಘನೆಯಾಗಿದ್ದು, ಗ್ರಾಮ ಸಭೆ ನಡೆಸಲು ಬಿಡುವುದಿಲ್ಲ ಎಂದು ಸಬ್ಲಾಡಿ ವಾರ್ಡ್‌ನ ಗ್ರಾಮಸ್ಥರು ಗಲಾಟೆಗಿಳಿದ ಘಟನೆ ಹಟ್ಟಿಯಂಗಡಿ ಗ್ರಾಮ ಸಭೆಯಲ್ಲಿ ನಡೆಯಿತು.ಕೂಡ್ಲು, ಕನ್ಯಾನ ಪ್ರಾಥಮಿಕ ಶಾಲೆಯಲ್ಲಿ ನಡೆದ ಗ್ರಾಮಸಭೆಯಲ್ಲಿ ಸ್ವಾಗತ, ವರದಿ, ನಡಾವಳಿ, ಲೆಕ್ಕಪತ್ರ ಮಂಡಿಸಿದ ಬಳಿಕ ಸಬ್ಲಾಡಿ ಗ್ರಾಮಸ್ಥರು ವಾರ್ಡ್ ಸಭೆ ನಡೆಸಿಲ್ಲ ಎಂದು ಆರೋಪಿಸಿ ಪಿಡಿಓ, ಅಧ್ಯಕ್ಷರ ವಿರುದ್ದ ಹರಿಹಾಯ್ದರು. ಗ್ರಾಮಸ್ಥರನ್ನು ಸಮಾಧಾನಪಡಿಸುವ ಪಯತ್ನ ನಡೆಸಿದರೂ ಫಲಿಸದ ಕಾರಣ ಸಭೆಯನ್ನು ಅರ್ಧದಲ್ಲೇ ನಿಲ್ಲಿಸಲಾಗಿದೆ ಎಂದು ಅಧ್ಯಕ್ಷ ರಾಜು ಶೆಟ್ಟಿ ಘೋಷಿಸಿದರು.ಸಬ್ಲಾಡಿ ವಾರ್ಡ್‌ನಲ್ಲಿ ಸಾಕಷ್ಟು ಸಮಸ್ಯೆಗಳಿವೆ.

 

ಪಂಚಾಯತ್ ವತಿಯಿಂದ ಏನೂ ಕೆಲಸ ಆಗಿಲ್ಲ. ನಮ್ಮ ಸಮಸ್ಯೆಗಳಿಗೆ ಧ್ವನಿಯಾಗಲು ವಾರ್ಡ್ ಸಭೆ ಅತ್ಯಗತ್ಯ. ಎಲ್ಲವನ್ನೂ ತಿಳಿದುಕೊಂಡು ವಾರ್ಡ್ ಸಭೆ ಮಾಡದೆ ಗ್ರಾಮ ಸಭೆ ನಡೆಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಗ್ರಾಮಸ್ಥರು ಖಂಡಿತವಾಗಿಯೂ ಗ್ರಾಮಸಭೆ ನಡೆಸಲು ನಾವು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜು ಶೆಟ್ಟಿ, ಅಧ್ಯಕ್ಷರು ಗ್ರಾಮಪಂಚಾಯತ್ ಹಟ್ಟಿಯಂಗಡಿಗ್ರಾಮಸಭೆ ನಿಲ್ಲಲಿಲ್ಲ. ನೂರಕ್ಕೂ ಅಧಿಕ ಮಂದಿ ಸಭೆಯಲ್ಲಿ ಭಾಗವಹಿಸಿದ್ದಾರೆ. ಸ್ವಾಗತ, ವರದಿ, ಪಾಲನಾ ವರದಿ, ಲೆಕ್ಕಾಚಾರ ಮಂಡನೆ ನಡೆದಿದ್ದು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಲು ಮುಂದಾದಾಗ ಸಬ್ಲಾಡಿ ಗ್ರಾಮಸ್ಥರು ಗಲಾಟೆಗಿಳಿದಿದ್ದಾರೆ. ಸಭೆಯಲ್ಲಿ ನೋಡೆಲ್ ಅಧಿಕಾರಿ ವಿಠಲ ರಾವ್, ಅಧ್ಯಕ್ಷನಾಗಿ ನಾನು ಮಾತನಾಡಿದ್ದೇನೆ. ಸಬ್ಲಾಡಿ ವಾರ್ಡ್‌ನ ಸದಸ್ಯರು ವಾರ್ಡ್ ಸಭೆ ನಡೆದಿಲ್ಲ ಎಂದು ಹೇಳಿದ್ದರಿಂದ ನಾನು ಆ ಸಭೆಯನ್ನು ಮುಂದೂಡಿದ್ದೇನೆ ಎಂದು ಹೇಳಿದ್ದೇನೆ ಹೊರತು ಗ್ರಾಮಸಭೆಯನ್ನು ಮುಂದೂಡಿದ್ದೇನೆ ಎಂದು ಹೇಳಿಲ್ಲ ಎಂದು ಹಟ್ಟಿಯಂಗಡಿ ಗ್ರಾಮಪಂಚಯತ್ ಅಧ್ಯಕ್ಷ ರಾಜು ಶೆಟ್ಟಿ ಹೇಳಿದರು.

Related posts

Leave a Reply