Header Ads
Header Ads
Breaking News

ಪಂಜಿಮೊಗರು ತಾಯಿ ಮಗು ಜೋಡಿ ಕೊಲೆ ಪ್ರಕರಣ, ಸಿಐಡಿಯಿಂದ ವಿಶೇಷ ತನಿಖಾ ತಂಡಕ್ಕೆ ನೀಡುವಂತೆ ಆಗ್ರಹ

ಮಂಗಳೂರಿನ ಪಂಜಿಮೊಗರಿನ ತಾಯಿ ಮಗು ಜೋಡಿ ಕೊಲೆ ಪ್ರಕರಣದ ತನಿಖೆಯನ್ನು ಸಿಐಡಿಯಿಂದ ವಾಪಸು ಪಡೆದು ವಿಶೇಷ ತನಿಖಾ ತಂಡಕ್ಕೆ ನೀಡಬೇಕೆಂದು ಆಗ್ರಹಿಸಿ ಡಿವೈಎಫ್‌ಐ ನೇತೃತ್ವದಲ್ಲಿ ಮಂಗಳೂರಿನ ಡಿಸಿ ಕಚೇರಿ ಬಳಿ ಪ್ರತಿಭಟನೆ ನಡೆಯಿತು. ಪ್ರಕರಣವಾಗಿ ಆರು ವರುಷವಾದ್ರೂ ತನಿಖೆಯನ್ನು ಸಿಐಡಿ ತಂಡ ಸಮರ್ಪಕವಾಗಿ ನಡೆಸಿಲ್ಲ. ಹೀಗಾಗಿ ಈ ಪ್ರಕರಣವನ್ನು ಸರ್ಕಾರ ವಿಶೇಷ ತನಿಖಾ ತಂಡಕ್ಕೆ ವಹಿಸಬೇಕು. ಸಿಐಡಿ ತನಿಖೆ ನಿಷ್ಪ್ರಯೋಜಕ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದರು. ಈ ಪ್ರಕರಣವನ್ನು ಸ್ಥಳೀಯ ಶಾಸಕರು ಮರೆತು ಬಿಟ್ಟಿದ್ದಾರೆ. ಪ್ರಕರಣಕ್ಕೆ ನ್ಯಾಯ ಒದಗಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಈ ವೇಳೆ ಡಿವೈಎಫ್‌ಐ ಮುಖಂಡಗಳಾದ ಇಮ್ತಿಯಾಜ್, ಸುನೀಲ್ ಬಜಾಲ್, ಜಯಂತಿ ಬಿ. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply