Breaking News

ಪಂಜಿಮೊಗರು ವ್ಯಾಪ್ತಿಯಲ್ಲಿ ಮದ್ಯದಂಗಡಿ ತೆರೆಯುವುದಕ್ಕೆ ವಿರೋಧ

ಮಂಗಳೂರಿನ ಗುಡ್ಡೆಯಂಗಡಿ, ಪಂಜಿಮೊಗರು ವ್ಯಾಪ್ತಿಯಲ್ಲಿ ಮದ್ಯದಂಗಡಿಗಳನ್ನ ತೆರೆಯುವುದನ್ನ ವಿರೋಧಿಸಿ ನಾಗರಿಕ ಸಮಿತಿ ವತಿಯಿಂದ ಗುಡ್ಡೆಯಂಗಡಿ ಬಳಿ ಪ್ರತಿಭಟನೆ ನಡೆಯಿತು.

ಕಾರ್ಪೋರೇಟರ್ ದಯಾನಂದ್ ಶೆಟ್ಟಿ ಮಾತನಾಡಿ, ಈಗಾಗಲೇ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಮದ್ಯದಂಗಡಿಗಳನ್ನು ತೆರಯಲು ಅವಕಾಶ ನೀಡದಂತೆ ಒತ್ತಡ ಹೇರಲಾಗಿದೆ. ಅದರೆ ಕೆಲವರು ರಾಜಕೀಯ ಪ್ರಭಾವಶಾಲಿಯ ಮೂಲಕ ಮದ್ಯದಂಗಡಿಗಳನ್ನು ತೆರಯಲು ಮುಂದಾಗುತ್ತಿದ್ದಾರೆ. ಈ ವ್ಯಾಪ್ತಿಯಲ್ಲಿ ಮದ್ಯದಂಗಡಿಗಳನ್ನು ತೆರೆದರೆ ಉಗ್ರ ರೀತಿಯಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ರು. ಈ ವೇಳೆ ಸ್ಥಳೀಯರಾದ ಸದಾಶಿವ ಸುವರ್ಣ, ಕರುಣಾಕರ ಗಾಂಭೀರ್, ಬಿ.ಕೆ,ಕೃಷ್ಣಪ್ಪ ಮತ್ತಿತರು ಉಪಸ್ಥಿತರಿದ್ದರು.
ವರದಿ: ನಾಗೇಶ್ ಕಾವೂರು

Related posts

Leave a Reply