Header Ads
Header Ads
Breaking News

ಪಂಡಿತ್ ಹೆಲ್ತ್ ರೆಸಾರ್ಟ್‌ನ ಭೂಮಿಯಲ್ಲಿ ಅಕ್ರಮ ಟವರ್ ನಿರ್ಮಾಣ : ನ್ಯಾಯಾಲಯದಿಂದ ತಡೆ ಕೋರಿ ಆದೇಶ

ಮೂಡುಬಿದರೆಯ ಅಲಂಗಾರ್‌ನಲ್ಲಿರುವ ಪಂಡಿತ್ ಹೆಲ್ತ್ ರೆಸಾರ್ಟ್‌ನ ಭೂಮಿಯಲ್ಲಿ ಖಾಸಗಿ ಸಂಸ್ಥೆಯಾದ ರಿಲಾಯನ್ಸ್ ಜಿಯೋ ಟವರ್ ನಿರ್ಮಾಣಕ್ಕೆ ಮುಂದಾಗಿದ್ದು, ಇದೀಗ ನ್ಯಾಯಾಲಯ ತಡೆಹಿಡಿದೆ. ರಿಲಾಯನ್ಸ್ ಜಿಯೋ ಇನ್ಪೋಕಾಮ್ ಲಿಮಿಟೆಡ್ ಪಂಡಿತ್ ಹೆಲ್ತ್ ರೆಸಾರ್ಟ್‌ನ ಭೂಮಿಯಲ್ಲಿ ಟವರ್ ನಿರ್ಮಿಸಲು ಮುಂದಾಗಿತ್ತು. ಈ ಹಿನ್ನೆಲೆಯಲ್ಲಿ ಪಂಡಿತ್ ಹೆಲ್ತ್ ರೆಸಾರ್ಟ್‌ನ ಮಾಲಕರು ಕೋರ್ಟ್ ಮೆಟ್ಟಿಲೇರಿದ್ದರು.  ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ಯವರು ಯಾವುದೇ ಕೇಬಲ್ ಅಗೆಯುವ ಅಥವಾ ಮುಂದಿನ ವಿಚಾರಣೆಯವರೆಗೆ ಟವರ್ ಸ್ಥಾಪಿಸಲು ನಿರ್ಬಂಧಸಲಾಗಿದೆ. ನವೆಂಬರ್ 21ರಂದು ಅಲಂಗಾರ್‌ನ ಪಂಡಿತ್ ಹೆಲ್ತ್ ರೆಸಾರ್ಟ್‌ನ ಖಾಸಗಿ ಭೂಮಿಯನ್ನು ಅಗೆಯಲು ಪ್ರಾರಂಭಿಸಿದ್ದು. ಈ ಭೂಮಿ ಸರ್ಕಾರಕ್ಕೆ ಸೇರಿದೆ ಎಂದು ಹೇಳಿದ್ದಾರೆ. ಅನುಮತಿ ಪತ್ರ ಮತ್ತು ದಾಖಲೆಗಳನ್ನು ತೋರಿಸಿ ಎಂದು ಹೇಳಿದಾಗ ಕಂಪನಿಯಿಂದ ಯಾವುದೇ ಉತ್ತರವಿಲ್ಲ. ಸುಮಾರು 15 ರಿಂದ 20 ಮಂದಿ ಬಾಂಗ್ಲಾ ಮಾತನಾಡುವ ಯುವಕರು ಕೇಬಲ್ ಅಗೆಯುವ ಕೆಲಸದಲ್ಲಿ ನಿರತರಾದರು. ನಂತರ ವಕೀಲರಾದ ಶರತ್ ಶೆಟ್ಟಿ ಮತ್ತು ಎಂ. ಚಿದಾನಂದ ಕೇದಿಲಾಯ ಅವರು ನ್ಯಾಯಾಲಯಕ್ಕೆ ತೆರಳಿ ಆದೇಶವನ್ನು ಪಡೆದರು.

 

Related posts

Leave a Reply

Your email address will not be published. Required fields are marked *