Header Ads
Header Ads
Header Ads
Breaking News

ಪಂಪ್‍ವೆಲ್ ಫ್ಲೈಓವರ್ ಕಾಮಗಾರಿ ವಿಳಂಬ : ಟೋಲ್ ಸಂಗ್ರಹ ಮಾಡದಂತೆ ಬಿಜೆಪಿ ಪ್ರತಿಭಟನೆ

ನವಯುಗ ಸಂಸ್ಥೆಯ ಪಂಪ್ ವೆಲ್ ಮೇಲ್ಸೇತುವೆ ನಿರ್ಮಾಣ ಕಾಮಗಾರಿ, ನಿಗದಿತ ಸಮಯದಲ್ಲಿ ಪೂರ್ಣಗೊಳಿಸದಿರುವುದನ್ನು ವಿರೋಧಿಸಿ ಸಂಸದ ನಳಿನ್ ಕುಮಾರ್ ಕಟೀಲ್ ಬಿಜೆಪಿ ಶಾಸಕರು ಹಾಗೂ ಕಾರ್ಯಕರ್ತರಿಗೆ ಕೊಟ್ಟ ಸೂಚನೆಯಂತೆ ತಲಪಾಡಿ ಟೋಲ್ ಗೇಟ್‍ನಲ್ಲಿ ಟೋಲ್ ಗೇಟ್ ನ್ನು ಕಂಬಕ್ಕೆ ಹಗ್ಗದಿಂದ ಕಟ್ಟುವ ಮೂಲಕ ತಡೆ ಒಡ್ಡಿ ಟೋಲ್ ರಹಿತ ಸಂಚಾರಕ್ಕೆ ಅವಕಾಶ ಮಾಡಿ ಕೊಡುವ ಮೂಲಕ ವಿನೂತನ ಪ್ರತಿಭಟನೆ ನಡೆಯಿತು.

ಸುಮಾರು ಮುನ್ನೂರಕ್ಕೂ ಮಿಕ್ಕಿದ ಬಿಜೆಪಿ ಕಾರ್ಯಕರ್ತರು, ಶಾಸಕ ವೇದವ್ಯಾಸ ಕಾಮತ್, ಶಾಸಕ ಡಾ. ಭರತ್ ಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಮೋನಪ್ಪ ಭಂಡಾರಿ, ಸೇರಿದಂತೆ ಪ್ರಮುಖ ನಾಯಕರ ಉಪಸ್ಥಿತಿಯಲ್ಲಿ ತಲಪಾಡಿ ಟೋಲ್ ಗೇಟ್ ಬಳಿ ಯಾವುದೇ ವಾಹನಗಳಿಂದ ಟೋಲ್ ಸಂಗ್ರಹಿಸದಂತೆ ಟೋಲ್ ಗೇಟ್‍ನ್ನು ಕಂಬಕ್ಕೆ ಹಗ್ಗದಿಂದ ಕಟ್ಟುವ ಮೂಲಕ ತಡೆ ಒಡ್ಡಿ ಟೋಲ್ ರಹಿತ ಸಂಚಾರಕ್ಕೆ ಅವಕಾಶ ಮಾಡಿ ಕೊಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.

ಸುಮಾರು ಏಳು ಗಂಟೆಗೆ ಕಾರ್ತಕರ್ತರು ಟೋಲ್ ಮುಂದೆ ಜಮಾಯಿಸಿದ್ದರು. 7.40ರಿಂದ ಸಂಚರಿಸುವ ಎಲ್ಲಾ ವಾಹನಗಳಿಗೆ ಟೋಲ್ ಶುಲ್ಕ ಪಾವತಿಸದೆ ಸಂಚರಿಸುವಂತೆ ಗೇಟ್ ಗೆ ಹಗ್ಗ ಕಟ್ಟಿದ ಬಳಿಕ ಟೋಲ್ ಸಿಬ್ಬಂದಿ, ಆರಕ್ಷಕರ ಸಹಕಾರ ಕೋರಿದರು. ಜ. 31ಕ್ಕೆ ಪಂಪ್ ವೆಲ್ ಕಾಮಗಾರಿ ಪೂರ್ಣಗೊಳಿಸುವ ಭರವಸೆ ಲಿಖಿತವಾಗಿ ಬರೆದುಕೊಟ್ಟಿದ್ದರೂ ಆ ಮಾತು ಹುಸಿಯಾಗಿದೆ. ಮೇಲ್ಸೇತುವೆ ನಿರ್ಮಾಣವಾಗದಿರುವುದರಿಂದ ಜನಸಾಮಾನ್ಯರಿಗೆ ತುಂಬ ಕಷ್ಟವಾಗ್ತಿದೆ. ಸಂಸ್ಥೆ ಆರ್ಥಿಕವಾಗಿ ಸಂಕಷ್ಟದಲ್ಲಿದೆ ಎಂಬ ಕಾರಣಕ್ಕೆ ಕಾಮಗಾರಿ ವಿಳಂಬವಾಗ್ತಿದೆ ಎಂಬ ಕಾರಣದಿಂದ ಸಂಸದರು ಸರಕಾರಕ್ಕೆ ಮನವಿ ಮಾಡಿ ಆಕ್ಸಿಸ್ ಬ್ಯಾಂಕಿನಿಂದ 56ಕೋಟಿ ರೂ.ಸಾಲ ತೆಗೆಸಿಕೊಟ್ಟಿದ್ದರೂ ಕಾಮಗಾರಿ ನಿಗದಿತ ಸಮಯದಲ್ಲಿ ಮುಗಿದಿಲ್ಲ. ಹಾಗಾಗಿ ಸಂಸದರ ಸೂಚನೆಯಂತೆ ಒಂದು ತಿಂಗಳು ಟೋಲ್ ಶುಲ್ಕ ಸಂಗ್ರಹಿಸದಂತೆ ಡೋಲ್ ಗೇಟ್ ನಲ್ಲಿ ಟೋಲ್ ಸಂಗ್ರಹಕ್ಕೆತಡೆ ಒಡ್ಡುವ ಗುರಿ ಇತ್ತಾದರೂ ಟೋಲ್ ಸಂಗ್ರಹ ಮಾಡದಿದ್ರೆ ನವಯುಗ ಸಂಸ್ಥೆಗೆ ಆರ್ಥಿಕ ತೊಂದರೆ ಎದುರಾಗದಂತೆ ಎಂಬ ಸಂಸ್ಥೆಯ ಉನ್ನತ ಅಧಿಕಾರಿಗಳ ಕಳಕಳಿಯ ಕೋರಿಕೆಯಂತೆ ಅವರಿಗೆ ತೊಂದರೆ ಆಗದಂತೆ ಕನಿಷ್ಠ ಬಿಸಿ ಮುಟ್ಟಿಸಬೇಕು ಎಂಬ ನೆಲೆಯಲ್ಲಿ ಸಾಂಕೇತಿಕ ಪ್ರತಿಭಟನೆಯ ರೂಪದಲ್ಲಿ ಮಾಡಿದ್ದೇವೆ. ಬಿಜೆಪಿ ನಿಲುವು ಜನರು ಕೂಡಾ ಅರ್ಥಮಾಡಿಕೊಂಡಿದ್ದಾರೆ. ನವಯುಗ ಸಂಸ್ಥೆಯ ಅಧಿಕಾರಿಗಳು ಜನವರಿ 31ಕ್ಕೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಮತ್ತೆ ಲಿಖಿತ ರೂಪದಲ್ಲಿ ಜಿಲ್ಲಾಧಿಕಾರಿಗೆ ಮನವಿ ಕೊಟ್ಟಿದ್ದಾರೆ. ತಪ್ಪಿದರೆ ಮತ್ತೆ ಉಗ್ರ ಪ್ರತಿಭಟನೆ ಮಾಡಲಿದ್ದೇವೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದ್ರು.

Related posts

Leave a Reply

Your email address will not be published. Required fields are marked *