Header Ads
Header Ads
Breaking News

“ಪಕ್ಷಕ್ಕೆ ಬರುವ ಎಂ.ಎಲ್.ಎ.ಗಳಿಗೆ ಸ್ವಾಗತ”. ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

ಕುಂದಾಪುರದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆಕುಂದಾಪುರ: ಸಿ.ಎಂ. ಕುಮಾರಸ್ವಾಮಿಗೆ ಹೆಚ್ಚು ಬೆಂಬಲ ಕೊಟ್ಟರೆ ಕಾಂಗ್ರೆಸ್ ಅಸ್ತಿತ್ವ ಉಳಿಯಲ್ಲ ಎಂಬ ಆತಂಕ ಸದ್ಯ ವಿದೇಶದಲ್ಲಿರುವ ಮಾಜಿ ಸಿ.ಎಂ ಸಿದ್ದರಾಮಯ್ಯ ಅವರಿಗೆ ಬಹಳ ತಡವಾಗಿ ತಿಳಿದಿದ್ದು ಅದರಿಂದಲೇ ಆಪರೇಶನ್ ಕಮಲದ ಬಗ್ಗೆ ಹೇಳಿಕೆಗಳು ಜಾಸ್ತಿಯಾಗಿದೆ. ಆಪರೇಶನ್ ಕಮಲವನ್ನು ಬಿಜೆಪಿ ಈವರೆಗೂ ಮಾಡಿಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.ಕುಂದಾಪುರದ ಶ್ರೀ ವ್ಯಾಸರಾಜ ಮಠ ಸಂಸ್ಥಾನದಲ್ಲಿ ಚಾತುರ್ಮಾಸ್ಯ ವ್ರತಾಚರಣೆಯಲ್ಲಿರುವ ಶ್ರೀ ಲಕ್ಷ್ಮೀಂದ್ರ ತೀರ್ಥ ಶ್ರೀಗಳ ದರ್ಶನ ಪಡೆದ ಬಳಿಕ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು. ಕುಂದ ನಾಡು ಬೆಳಗಾವಿಯ ರಾಜಕಾರಣ ಕನಕಪುರದ ಬಂಡೆಗೆ ಡಿಕ್ಕಿ ಹೊಡೆದ ಪರಿಣಾಮ ಅವರಲ್ಲಿಯೇ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿದೆ. ಜಾರಕಿ ಹೊಳೆ ಸಹೋದರರು ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆಯೆಂದು ಹೇಳಿಕೆ ನೀಡಿದ್ದು ಬೆಳಗಾವಿ ರಾಜಕಾರಣದಲ್ಲಿ ಅನ್ಯರ ಪ್ರವೇಶವಾಗುವ ಬಗ್ಗೆಯೂ ಹೇಳಿಕೊಂಡಿದ್ದಾರೆ. ಇದು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಆಂತರಿಕ ಸಮಸ್ಯೆಯಾಗಿದ್ದು ಅವರ ಈ ವಿವಾದಗಳಿಗೆ ಬಿಜೆಪಿ ಹೊಣೆಯೇ ಅಲ್ಲ ಎಂದರು.ಚೌತಿ ಬಳಿಕ ದೋಸ್ತಿ ಸರಕಾರ ಉರುಳುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾವಾಗಲೋ ದೋಸ್ತಿ ಸರಕಾರ ಉರುಳಬೇಕಿತ್ತು. ಇಷ್ಟು ಸಮಯ ಈ ಸರಕಾರ ಇದ್ದಿದ್ದೇ ತಪ್ಪು, ಚೌತಿ ಶುಭ ವೇಳೆ ಉರುಳಿದರೆ ಅದಕ್ಕೂ ನಮ್ಮ ಸ್ವಾಗತವಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ವ್ಯಂಗ್ಯವಾಡಿದರು.

Related posts

Leave a Reply