Header Ads
Header Ads
Breaking News

ಪಕ್ಷದ ಕಚೇರಿ ಮತ್ತು ಮಾಹಿತಿ ಸೇವಾ ಕೇಂದ್ರ ಉದ್ಘಾಟನೆ ತಲಪಾಡಿಯಲ್ಲಿ ಉದ್ಘಾಟನೆಗೊಂಡ ಸೇವಾ ಕೇಂದ್ರ

ಉಳ್ಳಾಲದ ತಲಪಾಡಿಯ ಎಸ್‌ಡಿಪಿಐ ವಲಯದ ಪಕ್ಷದ ಕಚೇರಿ ಮತ್ತು ಮಾಹಿತಿ ಸೇವಾ ಕೇಂದ್ರವನ್ನು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್ ಉದ್ಘಾಟನೆಗೊಂಡಿತು. ಈ ವೇಳೆ ಮಾತನಾಡಿದ ಅವರು,70 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಸರಕಾರಗಳು ದಲಿತರನ್ನು, ಮುಸ್ಲಿಮರನ್ನು ಗುಲಾಮರಂತೆ ನೋಡುತ್ತಿದೆ. ಆದರೆ ಗುಲಾಮಗಿರಿಗೆ ಇಸ್ಲಾಂನಲ್ಲಿ ಅವಕಾಶವೇ ಇಲ್ಲ ಅನ್ನುವುದನ್ನು ಮನವರಿಕೆ ಮಾಡಬೇಕಿದೆ.

ಈ ನಿಟ್ಟಿನಲ್ಲಿ ಶಿಕ್ಷಣ ಪಡೆದಲ್ಲಿ  ತಲೆಬಾಗದೆ ತಮ್ಮ ಹಕ್ಕನ್ನು ತಾವು ಕೇಳಬಹುದು. ಇದಕ್ಕಾಗಿ ಎಸ್‌ಡಿಪಿಐ ವೇದಿಕೆಯನ್ನು ಕಲ್ಪಿಸುತ್ತಿದೆ ಎಂದು ಹೇಳಿದರು. ಎಸ್‌ಡಿಪಿಐ ಮಂಗಳೂರು ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ ಅಬ್ಬಾಸ್ ಕಿನ್ಯಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಪರಂಗಿಪೇಟೆ , ಎಸ್‌ಡಿಪಿಐ ದ.ಕ ಜಿಲ್ಲಾಧ್ಯಕ್ಷ ಅತಾವುಲ್ಲ ಜೋಕಟ್ಟೆ, ರಾಜ್ಯ ಕಾರ್ಯದರ್ಶಿ ಅಕ್ರಂ ಹಸನ್, ಎಸ್‌ಡಿಎಯು ರಾಜ್ಯಾಧ್ಯಕ್ಷ ಅಬ್ದುಲ್ ಜಲೀಲ್ ಕೃಷ್ಣಾಪುರ ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.

Related posts

Leave a Reply