
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪಚ್ಚನಾಡಿ ಡಂಪಿಂಗ್ ಯಾರ್ಡ್ ಬಳಿಯ ಪ್ಲಾಸ್ಟಿಕ್ ಸಂಸ್ಕರಣಾ ಘಟಕದಲ್ಲಿ ರವಿವಾರ ಸಂಭವಿಸಿದ ಅಗ್ನಿ ದುರಂತದ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಪಾಲಿಕೆ ನಿಯೋಜಿತ ವಿಪಕ್ಷ ನಾಯಕ ಎ.ಸಿ. ವಿನಯ ರಾಜ್ ಆಗ್ರಹಿಸಿದ್ದಾರೆ. ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಚ್ಚನಾಡಿಯಲ್ಲಿ ಅಗ್ನಿ ದುರಂತ ಸಂಭವಿಸಿದ ಸಂದರ್ಭದಲ್ಲಿ ಆ ಘಟಕದ ಬಳಿ ಸೂಕ್ತ ಅಗ್ನಿ ಶಾಮಕ ವ್ಯವಸ್ಥೆ ಇಲ್ಲದಿರುವುದು .ಸೂಕ್ತ ನೀರಿನ ವ್ಯವಸ್ಥೆ ಇಲ್ಲದಿರುವುದು ಸೇರಿದಂತೆ ಸಾಕಷ್ಟು ನ್ಯೂನತೆಗಳು ಕಂಡು ಬಂದಿದೆ. ಜೊತೆಗೆ ಸ್ಥಳೀಯ ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಇದಕ್ಕೆ ಬಿಜೆಪಿ ಆಡಳಿತವೇ ನೇರ ಹೊಣೆ, ಈ ಬಗ್ಗೆ ಸಮಗ್ರ ತನಿಖೆ ಯಾಗಬೇಕು ಎಂದು ವಿನಯರಾಜ್ ಆಗ್ರಹಿಸಿದ್ದಾರೆ. ಪಚ್ಚನಾಡಿಯಲ್ಲಿ ಡಂಪಿಂಗ್ ಯಾರ್ಡ್ ಬಳಿ ತುರ್ತ ಅಗತ್ಯಗಳಿಗಾಗಿ ನಿರ್ಮಿಸಲಾಗಿದ್ದ ಕೊಳವೆ ಬಾವಿ ಮತ್ತು ಪಂಪ್ ಪಾಲಿಕೆ ಆಸ್ತಿಯಾಗಿದ್ದರೂ, ಅದನ್ನು ಪಾಲಿಕೆ ಒಪ್ಪಿಗೆಯಿಲ್ಲದೆ ಸ್ಥಳೀಯ ಸದಸ್ಯರು ಬೇರೆ ಕಡೆ ಸ್ಥಳಾಂತರ ಮಾಡಿದ್ದಾರೆ ಎಂದು ಎ.ಸಿ.ವಿನಯ ರಾಜ್ ಆರೋಪ ಮಾಡಿದ್ದಾರೆ. ಡಂಪಿಂಗ್ ಯಾರ್ಡ್ ಬಳಿ ತುರ್ತ ಅಗತ್ಯಗಳಿಗಾಗಿ ನಿರ್ಮಿಸಲಾಗಿದ್ದ ಕೊಳವೆ ಬಾವಿ ಮತ್ತು ಪಂಪ್ ಇತ್ತು. ಈ ಪಂಪ್ ಮಂಗಳೂರ ಮಹಾನಗರ ಪಾಲಿಕೆ ಆಸ್ತಿಯಾಗಿದ್ದರೂ ಅದನ್ನು ಪಾಲಿಕೆ ಒಪ್ಪಿಗೆಯಿಲ್ಲದೆ ಸ್ಥಳೀಯ ಸದಸ್ಯರು ಬೇರೆ ಕಡೆ ಸ್ಥಳಾಂತರ ಮಾಡಿ ದ್ದಾರೆ. ಇದರಿಂದ ತುರ್ತಾಗಿ ಅಗ್ನಿ ಶಾಮಕ ವ್ಯವಸ್ಥೆ ಗೆ ನೀರು ಪೂರೈಕೆ ಮಾಡಲು ಸಾಧ್ಯವಾಗಿಲ್ಲ. ಈ ಹಿಂದೆ ಪಚ್ಚನಾಡಿ ಕೇಂದ್ರದಲ್ಲಿ 12.5 ಕೋಟಿ ರೂ ವೆಚ್ಚದಲ್ಲಿ ಹಿಂದೆ ಸುಸಜ್ಜಿತ ಸಂಸ್ಕರಣಾ ಘಟಕದ ಡಿಪಿಆರ್ ಆಗಿದೆ. ಅದನ್ನು ಆಡಳಿತ ಪಕ್ಷ ಮುಂದುವರಿಸಿಲ್ಲ. ಪಚ್ಚನಾಡಿಯಲ್ಲಿ ರವಿವಾರ ಸಂಭವಿಸಿದ ಅಗ್ನಿ ದುರಂತಕ್ಕೆ,ಮತ್ತು ಅಗ್ನಿ ಶಾಮಕ ವ್ಯವಸ್ಥೆ ಇಲ್ಲದೆ ಇರುವುದಕ್ಕೆ ಆಡಳಿತದಲ್ಲಿರುವ ಬಿಜೆಪಿ ಪಕ್ಷ ಪ್ರಮುಖ ಕಾರಣ ಅಂತಾ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ಕೇಶವ ಮರೋಳಿ, ಅನಿಲ್ ಕುಮಾರ್, ಜೆಸಿಂತಾ ,ಪ್ರಕಾಶ್ ಸಾಲ್ಯಾನ್, ಝೀನತ್ ಸಂಶುದ್ಧೀನ್ ಮೊದಲಾದವರು ಉಪಸ್ಥಿತರಿದ್ದರು.