Header Ads
Breaking News

ಪಚ್ಚನಾಡಿ ಮಂದಾರ ಪ್ರದೇಶಕ್ಕೆ ನಗರಾಭಿವೃದ್ದಿ ಸಚಿವ ಭೇಟಿ

ಮಂಗಳೂರಿನ ಪಚ್ಚನಾಡಿ ಮಂದಾರ ತ್ಯಾಜ್ಯ ಕುಸಿದ ಪ್ರದೇಶಕ್ಕೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅಧಿಕಾರಿ ತಂಡದೊಂದಿಗೆ ಭೇಟಿ ನೀಡಿದ್ರು. ಇನ್ನು ಸ್ಥಳೀಯ ನಿವಾಸಿಗಳ ಸಮಸ್ಯೆಯನ್ನ ಆಲಿಸಿದ ಸಚಿವರು, ಅಧಿಕಾರಗಳನ್ನು ತರಾಟೆಗೆ ತೆಗೆದುಕೊಂಡರು. ಶೀಘ್ರದಲ್ಲೇ ಪ್ರದೇಶಕ್ಕೆ ಬೇಕಾದ ವ್ಯವಸ್ಥೆಯನ್ನು ಕಲ್ಪಿಸಿ ಕಾಮಗಾರಿ ಆರಂಭಿಸುವಂತೆ ಆದೇಶಿಸಿದರು. ಒಂದು ವಾರದೊಳಗೆ ಕಾಮಗಾರಿ ಆರಂಭಿಸಿ ಮಾಹಿತಿ ಸಹಿತ ಫೋಟೋ ಕಳುಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಪ್ರದೇಶದಲ್ಲಿ ರಸ್ತೆಯೇ ಇಲ್ಲದ ಹಿನ್ನೆಲೆಯಲ್ಲಿ ಮನಗಂಡ ಸಚಿವರು,ಕಾಪೋರೇಟರ್ ಗಳ ನಿರ್ಲಕ್ಷ್ಯ ಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಆದೇಶಿಸಿದರು. ಈವೇಳೆ ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ಡಿ.ವೇದವ್ಯಾಸ ಕಾಮತ್, ಮೇಯರ್ ದಿವಾಕರ್ ಪಾಂಡೇಶ್ವರ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *